ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರತಿಭಾನ್ವಿತ ಬಿ.ವಿ.ಕಾರಂತ
ಸುದ್ದಿ/ಗಾಸಿಪ್
Feedback Print Bookmark and Share
 
ಸಾಕಷ್ಟು ವಿವಾದ ಸೃಷ್ಟಿಸಿದ ಡಾ. ಎಸ್.ಎಲ್.ಬೈರಪ್ಪ ಅವರ ಕಾದಂಬರಿ ವಂಶವೃಕ್ಷ ಅದೇ ಹೆಸರಿನಲ್ಲಿ ಚಿತ್ರವಾಗಿತ್ತು.

ಆ ಚಿತ್ರದ ನಿರ್ದೇಶಕರಲ್ಲಿ ಒಬ್ಬರು ಬಿ.ವಿ.ಕಾರಂತ್. ನಂತರ ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚೋಮನ್ ದೊಡಿ ಚಿತ್ರಕ್ಕೆ ಅವರೇ ಸ್ವತಂತ್ರ ನಿದೇಶಕರಾದರು. ತಬ್ಬಲಿಯು ನೀನಾದೆ ಮಗನೆ ಚಿತ್ರಕ್ಕೂ ಬಿ.ವಿ.ಕಾರಂತರೇ ನಿರ್ದೇಶಕರು.

ಇಂಥ ಹತ್ತಾರು ಚಿತ್ರಗಳಿಗೆ ಅವರು ಸಂಗೀತ ನಿರ್ದೇಶಕರಾಗಿದ್ದರು. ಅನಂತನಾಗ್ ಅಭಿನಯದಲ್ಲಿ ಜಿ.ವಿ.ಅಯ್ಯರ್ ನಿರ್ದೇಶನದಲ್ಲಿ ಮೂಡಿಬಂದ ಹಂಸಗೀತೆ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು. ಆ ಚಿತ್ರದಲ್ಲಿ ಕಾರಂತರು ನಾಗ್ ಗುರುಗಳಾಗಿ ನೀಡಿದ ಅಭಿನಯ ಚಿತ್ರ ರಸಿಕರ ಅದರಲ್ಲೂ ಹೊಸ ಅಲೆ ಚಿತ್ರಗಳನ್ನು ಇಷ್ಟಪಡುವರ ಮನಸಿನಿಂದ ದೂರವಾಗದು.

ಬಿ.ವಿ. ಕಾರಂತರ ಪತ್ನಿ ರಂಗತಜ್ಞೆ ಹಾಗೂ ಸಿನೆಮಾ ನಿರ್ದೇಶಕಿ ಪ್ರೇಮಾ ಕಾರಂತ್ ಇತ್ತೀಚಿಗಷ್ಟೇ ನಿಧನರಾದರು. ಬಿ.ವಿ. ಕಾರಂತರು ನಿಧನರಾದಾಗ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಮಾಸ್ಟರ್ ಹಿರಣ್ಣಯ್ಯ ತಾವು ಮತ್ತು ಬಿ.ವಿ.ಕಾರಂತ್ ಅವರು ರಂಗಭೂಮಿ ವಿಷಯಕ್ಕಾಗಿ ಜಗಳವಾಡಿದ್ದನ್ನು ನೆನಪು ಮಾಡಿಕೊಂಡಿದ್ದರು.

ತಮ್ಮ ನಡುವೆ ಯಾವುದೇ ಬೇರೆ ವಿಷಯಕ್ಕೆ ಜಗಳವಾಗಿರಲಿಲ್ಲ, ಆದರೆ ರಂಗಭೂಮಿ ವಿಷಯಕ್ಕಾಗಿ ಈ ಜಗಳ ನಡೆಯುತು ಎಂದು ಹಿರಣ್ಣಯ್ಯ ಹೇಳಿದ್ದರು. ಅಂದರೆ ಬಿ.ವಿ.ಕಾರಂತರ ಮನಸ್ಸಿನಲ್ಲಿ ಎಲ್ಲವೂ ರಂಗಭೂಮಿಯೇ ತುಂಬಿತ್ತು.