ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಕ್ಷಕನನ್ನು ಮೆಚ್ಚಿಸಲು ಪ್ರೇಮ್ ಹರಸಾಹಸ
ಸುದ್ದಿ/ಗಾಸಿಪ್
Feedback Print Bookmark and Share
 
ಪ್ರೇಮ್‌ಗೆ ಲವ್ಲಿ ಸ್ಟಾರ್ ಎಂದು ಹೆಸರು. ಅವರು ತಮ್ಮ ಶೈಲಿ ಬಿಟ್ಟು ಬೇರೆ ಶೈಲಿ ತೋರಿದರೆ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲ ಎಂದು ಕಾಣುತ್ತದೆ.

ಅದರಿಂದಾಗಿ ಗುಣವಂತ ಚಿತ್ರ ಯಶಸ್ಸು ಕಂಡಿಲ್ಲ ಎಂಬುದು ಗಾಂಧಿನಗರದ ಮಾತು. ಗುಣವಂತ ಯಶಸ್ಸು ಕಂಡಿಲ್ಲ ಎಂದು ಪ್ರೇಮ್ ಸುಮ್ಮನೆ ಕುಳಿತಿಲ್ಲ. ಪ್ರೇಕ್ಷಕರನ್ನು ಎಂದಿನಂತೆ ಮೆಚ್ಚಿಸಲು ಅವರು ಜನುಮ ಜನುಮದಲ್ಲೂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಮೇಶ್ ಯಾದವ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ.

ಇತ್ತೀಚಿಗೆ ಪ್ರೇಮ್ ಹೀರೋ ಆಗಿ ನಟಿಸುವ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ. ಚಿತ್ರದ ಕಥೆ ಕೇಳದೆ ಕಣ್ಣುಮುಚ್ಚಿಕೊಂಡು ಅವರ ನಟಿಸುತ್ತಿದ್ದಾರೆ, ಅಥವಾ ಚಿತ್ರದ ಮೇಲೆ ಭರವಸೆ ಹುಸಿಯಾಗುತ್ತಿದೆ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯ.

ಪಲ್ಲಕ್ಕಿ, ಸವಿಸವಿನೆನಪು ಹಾಗೂ ಗುಣವಂತ ಚಿತ್ರಗಳು ಯಶಸ್ಸು ಕಂಡಿಲ್ಲ. ಹಾಗಾಗಿ ಅವರ ಮುಂದಿನ ಚಿತ್ರ ಜನುಮ ಜನುಮದಲ್ಲೂ ಚಿತ್ರ ಯಶಸ್ಸು ಕಾಣಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.