ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವೀಕ್ಷಕರ ಸಹನೆ ಪರೀಕ್ಷೆಯಲ್ಲಿ ಸಹಗಮನ
ಸುದ್ದಿ/ಗಾಸಿಪ್
Feedback Print Bookmark and Share
 
ಒಂದೇ ಹೆಸರಿನ ಇಬ್ಬರು ಯುವತಿಯರ ವೈದ್ಯಕೀಯ ತಪಾಸಣೆಯ ವರದಿಗಳು ಅದಲು ಬದಲಾದರೆ ಏನಾಗುತ್ತದೆ? ಸಾಕಷ್ಟು ಅನಾಹುತಗಳು ಆಗುತ್ತವೆ ಎಂದು ಉತ್ತರ ಹೇಳಬಹುದು. ಆದರೆ ಸಹಗಮನ ಧಾರವಾಹಿಯಲ್ಲಿ ಇಂಥದೊಂದು ಪ್ರಸಂಗ.

ಒಬ್ಬಳಿಗೆ ತನ್ನ ಬದುಕು ಇನ್ನು ಮೂರು ತಿಂಗಳಲ್ಲಿ ಮುಗಿಯುತ್ತದೆ ಎಂದು ಗೊತ್ತಾಗುತ್ತದೆ. ಇನ್ನೊಬ್ಬಳು ತನಗೇನೂ ಕಷ್ಟವಿಲ್ಲ ಎಂದು ಭಾವಿಸುತ್ತಾಳೆ. ಆದರೆ ಹಾಗಾಗಲ್ಲ. ಯಾರಿಗೆ ಯಾವ ತೊಂದರೆ ಇದೆ ಎಂದು ವೀಕ್ಷಕರಿಗೆ ಹೇಳುವವರೆಗೆ ಕಥೆಯನ್ನು ಎಳೆದುಕೊಂಡು ಹೋಗಬಹುದು. ಅಗತ್ಯವಿದ್ದರೆ ಇನ್ನೂ ಬೆಳಸಬಹುದು.

ಇದು ಕಸ್ತೂರಿ ವಾಹಿನಿಯಲ್ಲಿ ಈಗಾಗಲೇ 50 ಕಂತುಗಳನ್ನು ಪೂರೈಸಿಕೊಂಡು ಮುಂದುವರೆಯುತ್ತಿರುವ ಸಹಗಮನ ಸೀರಿಯಲ್ ಕಥೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಮಧ್ಯಾಹ್ನ 2ಕ್ಕೆ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ಆಲಾಪ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ.

ಬೆಳ್ಳಿತೆರೆ ಕಥೆಗಳು ಗಂಡಿನ ಮಾಧ್ಯಮ ಕನಸುಗಳನ್ನು ಬಿತ್ತುವಂತಾದರೆ ಕಿರುತೆರೆ ಹೆಣ್ಣಿನ ಮಾಧ್ಯಮ ಎಂಬ ಸೂತ್ರದೊಂದಿಗೆ ನಿರ್ದೇಶಕ ಜಯಂತ್ ಈ ಧಾರಾವಾಹಿಯನ್ನು ರೂಪುಗೊಳಿಸುತ್ತಿರುವುದರಿಂದ ನಾವು ಏನೂ ಮಾತನಾಡುವಂತಿಲ್ಲ.