ಅಭಿನಯ ಮೆರೆದ ಗಾಯಕಿ
ಬೆಂಗಳೂರು, ಶುಕ್ರವಾರ, 14 ಡಿಸೆಂಬರ್ 2007( 17:07 IST )
ಕನ್ನಡ ಟಿವಿ ವಾಹಿನಿಗಳಲ್ಲಿ ಮಕ್ಕಳಲ್ಲಿ ಅಡಗಿರುವ ಅಭಿನಯ, ಗಾಯನ ಪ್ರತಿಭೆಯನ್ನು ಹೊರಗೆ ತೆಗೆಯುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಹಾಗೇ ಈ-ಟಿವಿಯ ಎದೆ ತುಂಬಿ ಹಾಡುವೆನು ಹಾಗೂ ಝೀ ಟಿವಿಯ ಸರಿಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಒಬ್ಬಳು ಬಾಲ ಗಾಯಕಿಯಾಗೆ ಉಳಿಯದೇ ಕಲಾವಿದೆಯಾಗಿ ರೂಪುಗೊಂಡಿದ್ದಾಳೆ.
ಕಸ್ತೂರಿ ವಾಹಿನಿಗಾಗಿ ಕಲಾಗಂಗೋತ್ರಿ ಮಂಜು ನಿರ್ಮಿಸಿ, ನಿರ್ದೇಶಿಸುತ್ತಿರುವ ಕಾಲದ ಕಡಲು ಸೀರಿಯಲ್‌ನಲ್ಲಿ ಸಿಂಚನ್ ದೀಕ್ಷಿತ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅಭಿನಯಕ್ಕೆ ಅವಕಾಶ ದೊರೆತಿರುವುದು ಸಂತೋಷ ಎನಿಸಿದರೂ ತನ್ನ ಗಾಯನಕ್ಕೆ ಕೊಕ್ಕೆ ಬೀಳಲಿದೆ ಎನ್ನುವುದು ಸಿಂಚನ್ ಅಳಲು. ಈಕೆಗೆ ಸಾಕಷ್ಟು ಅವಕಾಶಗಳು ಬಂದಿವೆ. ಸರಿಗಮಪ ಕಾರ್ಯಕ್ರಮದಲ್ಲಿ ಆಕೆಯ ಧ್ವನಿ ಕೇಳಿ ಇಷ್ಟ ಪಟ್ಟು ರಾಜಶೇಖರ್‌ರಾವ್ ತಮ್ಮ ಒಂದು ಪ್ರೀತಿಯ ಕತೆ ಚಿತ್ರದಲ್ಲೊಂದು ಅವಕಾಶ ಕೊಟ್ಟರು.
ಆ ಚಿತ್ರದಲ್ಲಿ ಸಿಂಚನ್ ಪ್ರೀತಿಗೆ ಹೊತ್ತು ಗೊತ್ತಿಲ್ಲ ಎಂದು ಸಾಗುವ ಹಾಡು ಹಾಡಿದರು. ನಂತರ ಹಲವು ಚಿತ್ರಗಳಲ್ಲಿ ಆಕೆ ಕೆಲ ಹಾಡುಗಳನ್ನು ಹಾಡಿದ್ದಾಳೆ. ಇಂದ್ರಜಿತ್ ಲಂಕೇಶ್ ಶಾದಿಕೆ ಆಫ್ಟರ್ ಎಫೆಕ್ಟ್ಸ್ ಎಂಬ ಹಿಂದಿ ಚಿತ್ರದಲ್ಲಿ ಈಕೆ ಧ್ವನಿ ಕೊಟ್ಟಿದ್ದಾರೆ. ಎದ್ದೇಳು ಮಂಜುನಾಥ ಚಿತ್ರದಲ್ಲಿ ಆಕೆ ಪ್ರಪಂಚವೇ ದೇವರು ಮಾಡಿರೋ ಬಾರು ಎಂಬ ಹಾಡು ಹಾಡಿದ್ದಾರೆ.