ಮುಗಿಯದ ಥಿಯೇಟರ್ ಕೊರತೆ
ಬೆಂಗಳೂರು, ಶುಕ್ರವಾರ, 14 ಡಿಸೆಂಬರ್ 2007( 17:09 IST )
ಕನ್ನಡ ಚಿತ್ರಗಳಿಗೆ ಥಿಯೇಟರ್‌ಗಳ ಕೊರತೆ ಎನ್ನುವ ಕೊರಗು ಇಂದು ನಿನ್ನೆಯದಲ್ಲ. ಎಷ್ಟೋ ವರ್ಷಗಳಿಂದ ಥಿಯೇಟರ್‌ಗಳಿಗಾಗಿ ನಿರ್ದೇಶಕರು, ನಿರ್ಮಾಪಕರು ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ.
ಆದರೂ ಇದು ಬಗೆಹರಿಯದ ಸಮಸ್ಯೆಯಾಗೇ ಉಳಿದಿದೆ. ಪ್ರಸ್ತುತ ಕನ್ನಡದಲ್ಲಿ ತಯಾರಾಗುವ ಚಿತ್ರಗಳ ಸಂಖ್ಯೆ ಹೆಚ್ಚು. ಅದರಿಂದಾಗಿ ಥಿಯೇಟರ್‌ಗಳನ್ನು ಚಿತ್ರದ ಷೂಟಿಂಗ್ ಪ್ರಾರಂಭವಾಗುವ ಮುನ್ನವೇ ಬುಕ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ.
ಮೊನ್ನೆವರೆಗೆ ಕೆಂಪೇಗೌಡ ರಸ್ತೆಯ ಸ್ವಪ್ನ ಚಿತ್ರಮಂದಿರದಲ್ಲಿ ಸೆಕೆಂಡ್ ರನ್ ಚಿತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿತ್ತು. ಆದರೆ ಈಗ ಹೊಸ ಚಿತ್ರಗಳೇ ತೆರೆ ಕಾಣುತ್ತಿವೆ. ಈ ವಾರ ಪ್ರೀತಿಯ ಹುಚ್ಚ ಎಂಬ ಹೊಸ ಚಿತ್ರ ಆ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಇದರ ನಿರ್ಮಾಪಕರು ರವಿಕುಮಾರ್, ನಿರ್ದೇಶಕ ಪ್ರಭಾಕರ ರೆಡ್ಡಿ ಎಂದು ಜಾಹೀರಾತಿನಲ್ಲಿದೆ.
ಅಂದರೆ ಈ ಚಿತ್ರದ ಚಿತ್ರೀಕರಣ ಯಾವಾಗ ನಡೆಯುತು, ಯಾರು ಕಲಾವಿದರು ಎಂಬ ಗುಟ್ಟು ರಟ್ಟಾಗದೇ ಈ ಚಿತ್ರ ಪೂರ್ಣಗೊಂಡಿದೆ. ಚಿಕ್ಕಮಗಳೂರಿನ ಕವಿತಾ ಎಂಬ ಸೀರಿಯಲ್ ನಟಿ ನಾಯಕಿ ಎಂದು ಗೊತ್ತಾಗಿದೆ. ಇವಿಷ್ಟು ಬಿಟ್ಟರೆ ಚಿತ್ರದ ಇತರ ವಿವರಗಳಿಗೆ ಈ ಚಿತ್ರ ನೋಡಲೇಬೇಕು.