ಬದಲಾದ ಗೆಟಪ್‌ನೊಂದಿಗೆ ತಾಜ್‌ಮಹಲಿನಲ್ಲಿ ಅಜಯ್
ಬೆಂಗಳೂರು, ಶನಿವಾರ, 15 ಡಿಸೆಂಬರ್ 2007( 16:06 IST )
ಆರ್. ಚಂದ್ರು ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ತಾಜಮಹಲ್ ಚಿತ್ರದಲ್ಲಿ ಅಜಯ್ ಹೀರೋ ಆಗಿ ಅಭಿನಯಿಸುತ್ತಿದ್ದಾರೆ.
ಆದರೆ ಇದರಲ್ಲೊಂದು ವಿಶೇಷವಿದೆ. ಗುರುತು ಹಿಡಿಯಲಾರದಷ್ಟು ಅಜಯ್ ಬದಲಾಗಿದ್ದಾರೆ. ಈ ಮೊದಲು ಅವರ ಪರಿಚಯವಿದ್ದವರು ಗುರುತು ಹಿಡಿಯಲಾರದಷ್ಟು ಬದಲಾವಣೆಯಾಗಲು ತಾಜಮಹಲ್ ಕಾರಣ ಎನ್ನುತ್ತಾರೆ.
ತಾಜ್‌ಮಹಲ್ ಟೈಟಲ್‌ನಲ್ಲೇ ಪ್ರೀತಿ ಇದೆ. ಒಬ್ಬಳು ಹುಡುಗಿಯನ್ನು ಪ್ರೀತಿಮಾಡಬೇಕಾದರೆ ಇಷ್ಟಾದರೂ ಗೆಟಪ್ ಬೇಡವೇ ಎಂದು ತುಂಟನಗೆ ಬೀರುತ್ತಾರೆ ಅವರು.
ಹೇರ್ ಸ್ಟೈಲ್ ಬದಲಿಸಿದ್ದಾರೆ. ಡ್ರೆಸ್ ಬದಲಾಗಿದೆ. ಈ ಪಾತ್ರಕ್ಕೆ ಶ್ರೀಮಂತ ಗೆಟಪ್ ಅಗತ್ಯವಿದೆ. ಹಾಗಾಗಿ ನಿರ್ದೇಶಕರು ಹೀರೋ ಹೀಗೇ ಇರಬೇಕು ಎಂದು ಸೂಚನೆ ನೀಡಿದ್ದಾರೆ. ನಿರ್ದೇಶಕರ ನಟನಾದ ಅಜಯ್ ಅದರಂತೆ ತಮ್ಮ ರೂಪು ಮತ್ತು ಲಾವಣ್ಯ ಬದಲಾಯಿಸಿಕೊಂಡಿದ್ದಾರೆ.
ತಾಜ್‌ಮಹಲ್ ಎಂಬ ಟೈಟಲ್ ಇದ್ದರೂ ಈ ಚಿತ್ರದ ಷೂಟಿಂಗ್ ತಾಜ್‌ಮಹಲ್‌ನಲ್ಲಿ ನಡೆಯುವುದಿಲ್ಲ ಎಂದು ನಿರ್ದೇಶಕ ಚಂದ್ರು ಸ್ಪಷ್ಟಪಡಿಸಿದ್ದಾರೆ. ಈ ಚಿತ್ರವನ್ನು ಶಿವಶಂಕರ್ ರೆಡ್ಡಿ, ಅಶೋಕ್ ನಿರ್ಮಿಸುತ್ತಿದ್ದಾರೆ. ಅಭಿಮನ್ ಸಂಗೀತ ನಿರ್ದೇಶಕರು. ಅಜಯ್ ಮತ್ತು ಚಂದ್ರವಿಗೆ ಈ ಚಿತ್ರ ಯಶಸ್ಸು ತಂದುಕೊಡಲಿ ಎಂದು ಹಾರೈಸೋಣ.