ನಂದ ಲವ್ಸ್ ನಂದಿತಾ ಟಾಕಿ ಪೂರ್ಣ
ಬೆಂಗಳೂರು, ಶನಿವಾರ, 15 ಡಿಸೆಂಬರ್ 2007( 16:07 IST )
ಪ್ರೀತಿ ಎಂಬ ವಸ್ತುವಿನಿಂದ ಈವರೆಗೆ ಸಾವಿರಾರು ಸಿನೆಮಾಗಳು ತಯಾರಾಗಿವೆ. ಇನ್ನು ಮುಂದೆಯೂ ಸಾವಿರಾರು ಸಿನೆಮಾಗಳು ಬರಬಹುದು.
ಅದೇ ರೀತಿ ಭೂಗತ ಜಗತ್ತಿನ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಖ್ಯೆ ಸಿನೆಮಾಗಳು ಬಂದಿವೆ. ಇನ್ನು ಮುಂದೆಯೂ ಬರಬಹುದು. ಭೂಗತ ಜಗತ್ತಿನ ವ್ಯಾಪ್ತಿಯಲ್ಲೇ ಪ್ರೀತಿ ಅರಳುವ ಒಂದು ಪ್ರೇಮಕಥೆ ನಂದ ಲವ್ಸ್ ನಂದಿತಾ ರೂಪು ಗೊಳ್ಳುತ್ತಿದೆ.
ಈಗಾಗಲೇ ಮಾತಿನ ಭಾಗ ಪೂರ್ಣಗೊಂಡಿದೆ. ಮಾತುಗಳ ಜೋಡಣೆ ನಡೆಯುತ್ತಿದೆ. ಇನ್ನು ನಾಲ್ಕು ಗೀತೆಗಳ ಚಿತ್ರೀಕರಣ ಬಾಕಿಯಿದೆ ಎಂದು ನಿರ್ದೇಶಕ ಗೆಜ್ಜೆನಾದ ವಿಜಯಕುಮಾರ್ ತಿಳಿಸಿದ್ದಾರೆ.
ಈ ಹಾಡುಗಳ ಚಿತ್ರೀಕರಣ ರಾಜ್ಯದ ಸುಂದರ ತಾಣಗಳಲ್ಲಿ ನಡೆಯಲಿದೆ. ದುನಿಯಾದ ಲೂಸ್ ಮಾದನಾಗಿ ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿರುವ ಯೋಗೀಶ್ ಈ ಚಿತ್ರದ ನಾಯಕ. ನಂದಿತಾ, ಅವಿನಾಶ್, ಗಿರಿಜಾ ಲೋಕೇಶ್, ಸುರೇಶ್ಚಂದ್ರ, ಜೋಗಿ ನಾಗರಾಜ್, ಸುನಿತಾ ಶೆಟ್ಟಿ, ಶೋಭಾ, ರಮೇಶ್ ಮತ್ತಿತರರು ಚಿತ್ರದ ತಾರಾಗಣದಲ್ಲಿದ್ದಾರೆ.
ಅಜಯ್ ಕುಮಾರ್ ಕಥೆ ಮತ್ತು ಚಿತ್ರಕಥೆ ಒದಗಿಸಿದ್ದರೆ, ಮ್ಯಾಥ್ಯೂರಾಜನ್ ಛಾಯಾಗ್ರಹಣ, ಕೆ.ಎಸ್. ಪ್ರಕಾಶ್ ಸಂಕಲನ, ಮಂಜು ಮಾಂಡವ್ಯ ಸಂಭಾಷಣೆ, ನಾಗೇಂದ್ರಪ್ರಸಾದ್, ಕವಿರಾಜ್, ತಂಗಾಳಿ ನಾಗರಾಜ್ ಗೀತ ಸಾಹಿತ್ಯ