ಪುನೀತ್ ಹೊಸ ಚಿತ್ರದ ಟೈಟಲ್ ಮಯೂರ
ಬೆಂಗಳೂರು, ಶನಿವಾರ, 15 ಡಿಸೆಂಬರ್ 2007( 16:08 IST )
ಡಾ. ರಾಜ್ ಕುಟುಂಬದ ಕಲಾವಿದರ ಅಭಿನಯದಲ್ಲಿ ಹೊಸ ಚಿತ್ರ ಬರುತ್ತದೆ ಎಂದರೆ ಎಲ್ಲರಿಗೂ ಕುತೂಹಲ ಹೆಚ್ಚು.
ಪುನೀತ್ ರಾಜಕುಮಾರ್ ಹೊಸ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ ಎಂದು ಪ್ರಕಟಗೊಂಡಿದ್ದರೂ ಅದರ ಟೈಟಲ್ ನಿಗದಿಯಾಗಿರಲಿಲ್ಲ.
ಪುನೀತ್ ಜೊತೆಯಲ್ಲಿ ನಾಯಕಿಯರಾಗಿ ಸಂಧ್ಯಾ ಹಾಗೂ ಶ್ರದ್ದಾ ಆರ್ಯ ಇರುತ್ತಾರೆ ಎಂದು ಪ್ರಕಟವಾಗಿದೆ. ಇನ್ನು ವಿಶೇಷವೆಂದರೆ ಈ ಸಿನೆಮಾದ ಟೈಟಲ್. ಈಗಷ್ಟೇ ಚಿತ್ರದ ಟೈಟಲ್ ಮಯೂರ ಎಂದು ಖಚಿತ ಪಡಿಸಿರುವುದಾಗಿ ಈ ಚಿತ್ರ ನಿರ್ಮಾಣದ ಮೂಲಗಳು ತಿಳಿಸಿವೆ.
ಹಾಗೇ ಟೈಟಲ್ ಕೆಳಗೆ ಉಪಶೀರ್ಷಿಕೆಯಾಗಿ ನಾನಿರುವುದೇ ನಿಮಗಾಗಿ ಎಂದು ಇರುತ್ತದೆ. ಕನ್ನಡ ಚಿತ್ರರಂಗದಲ್ಲಿ ಮಯೂರ ಹೆಸರು ಗಳಿಸಿದ ಚಿತ್ರ. ಆ ಮಯೂರದಲ್ಲಿ ಡಾ. ರಾಜ್ ಅಭಿನಯಿಸಿದ್ದರು. ಅವರ ಪುತ್ರ ಪುನಿತ್‌ರಾಜ್‌ಕುಮಾರ್ ಅವರ ಅಭಿನಯದಲ್ಲಿ ರೂಪುಗೊಳ್ಳುವ ಈ ಚಿತ್ರ ಅದರ ರೀಮೇಕ್ ಅಲ್ಲದಿದ್ದರೂ ಹೆಸರು ಮಾತ್ರ ಕಾಪಿ ಮಾಡಲಾಗಿದೆ ಅಷ್ಟೆ.
ಆ ಚಿತ್ರದಲ್ಲಿ ನಾನಿರುವುದೇ ನಿಮಗಾಗಿ ಎಂದು ರಾಜ್ ಹಾಡಿದ ತಕ್ಷಣ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು. ಈ ಚಿತ್ರದಲ್ಲಿ ಹೀರೋ ಜನಸಾಮಾನ್ಯರ ಹಿತಕ್ಕಾಗಿ ಹೋರಾಡುತ್ತಾನೆ ಎಂದು ಭಾವಿಸೋಣ.