ಮೇಘವೇ ಮೇಘವೇ ಸಂಪೂರ್ಣ: ಸುದೀಪ್ ಅತಿಥಿ ಪಾತ್ರದಲ್ಲಿ
ಬೆಂಗಳೂರು, ಶನಿವಾರ, 15 ಡಿಸೆಂಬರ್ 2007( 16:10 IST )
ಡಾ.ನಾಗೇಂದ್ರ ಪ್ರಸಾದ್ರ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಮೇಘವೇ ಮೇಘವೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
ಈ ಚಿತ್ರದ ಮೂಲಕ ಬಾಲಿವುಡ್ ನಟಿ ಗ್ರೇಸಿ ಸಿಂಗ್ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ರಾಮ್ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಒಂದು ವಿಶೇಷ.
ದಾಸರಿ ಸೀನು ಛಾಯಾಗ್ರಹಣ, ಹರಿಕೃಷ್ಣ ಸಂಗೀತ ಸಂಯೋಜನೆ. ಈ ಚಿತ್ರದ ಕಥೆ ಬರೆಯುವಾಗಲೇ ಗ್ರೇಸಿಸಿಂಗ್ ಈ ಚಿತ್ರದ ನಾಯಕಿ ಪಾತ್ರಕ್ಕೆ ಸೂಕ್ತ ಎಂದು ನಿರ್ದೇಶಕರಿಗೆ ಹೊಳೆದಿತ್ತು. ತಮ್ಮ ನೀರೀಕ್ಷೆಗೆ ತಕ್ಕಂತೆ ಗ್ರೇಸಿ ಸಿಂಗ್ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಅವರು ಹೇಳಿದ್ದಾರೆ.