ಕಾಲೇಜಲ್ಲಿ ಯಾರೇ ನೀ ಹುಡುಗಿ
ಬೆಂಗಳೂರು, ಮಂಗಳವಾರ, 18 ಡಿಸೆಂಬರ್ 2007( 15:53 IST )
ಸ್ಯಾಂಡಲ್‌ವುಡ್ ಪಿಕ್ಚರ್ಸ್ ಲಾಂಛನದಲ್ಲಿ ಜೆ. ಚಂದ್ರಕಲಾ ಅವರು ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ನಿಮಿಸುತ್ತಿರುವ, ಬಿ.ಶಂಕರ್ ನಿರ್ದೇಶನದ ಯಾರೇ ನೀ ಹುಡುಗಿ ಚಿತ್ರಕ್ಕೆ ನಗರದ ಪ್ರಮುಖ ಕಾಲೇಜೊಂದರಲ್ಲಿ ಚಿತ್ರೀಕರಣ ನಡೆಸಲಾಯಿತು.
ಅನಿರುದ್ಧ್, ಸಿಂಧು ಮೆನನ್, ಪಾರ್ಥ, ಮೈತ್ರಿಯಾ, ಪದ್ಮಾ ವಾಸಂತಿ, ಪದ್ಮಜಾ ರಾವ್, ಶಿವರಾಂ, ಪ್ರಕಾಶ್ ಹೆಗ್ಗೋಡ, ವಿಜಯಕಾಶಿ ಮುಂತಾದವರು ತಾರಾಗಣದಲ್ಲಿರುವ ಈ ಚಿತ್ರಕ್ಕೆ ಎಲ್. ಎನ್.ಶಾಸ್ತ್ತ್ರಿ ಸಂಗೀತ ನೀಡಿದ್ದಾರೆ.