ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಸಂತ ಕಾಲಕ್ಕೆ ಡಬ್ಬಿಂಗ್
ಸುದ್ದಿ/ಗಾಸಿಪ್
Feedback Print Bookmark and Share
 
ಪಾರ್ವತಿ ಪರಮೇಶ ಕಂಬೈನ್ಸ್ ಲಾಂಛನದಡಿ ಎಂ.ಕೃಷ್ಣ ಅವರು ನಿರ್ಮಿಸುತ್ತಿರುವ ವಸಂತಕಾಲಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಪೂರ್ಣಗೊಂಡಿದೆ.

ತಾಯಿ-ಮಗನ ಬಾಂಧವ್ಯದೊಂದಿಗೆ ನವಿರಾದ ಪ್ರೇಮಕಥೆಯನ್ನೊಳಗೊಂಡ ಈ ಚಿತ್ರವನ್ನು ಮೊದಲಬಾರಿಗೆ ಯುವನಿರ್ದೇಶಕ ವಡನಹಳ್ಳಿ ಶ್ರೀನಿವಾಸ್ ಅವರು ಕತೆ, ಚಿತ್ರಕತೆ ಬರೆಯುವುದರೊಂದಿಗೆ ನಿರ್ದೇಶಿಸುತ್ತಿದ್ದಾರೆ.

ನಾಗರಕಿರಣ್ ಹಾಗೂ ಹರಿಪ್ರಿಯ ಚಿತ್ರದ ನಾಯಕ ನಾಯಕಿ. ನಿರ್ಮಾಪಕರ ಪುತ್ರ ಸುಧಾಕರ್, ದ್ವಿತೀಯ ನಾಯಕನಾಗುವ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ.

ನೂರು ಚಿತ್ರಗಳಿಗೆ ಸಂಗೀತ ನೀಡಿರುವ ವಿ. ಮನೋಹರ್ ವಸಂತ ಕಾಲಕ್ಕೆ ಹಾಡು ಬರೆಯುವುದರೊಂದಿಗೆ ಸಂಗೀತವನ್ನು ಸಂಯೋಜಿಸಿದ್ದಾರೆ. ವೀನಸ್ಮೂರ್ತಿ ಛಾಯಾಗ್ರಹಣ, ಮಂಜು ಮಾಂಡವ್ಯ ಸಂಭಾಷಣೆ ಇರುವ ಈ ಚಿತ್ರದಲ್ಲಿ ನಾಗಕಿರಣ್, ಹರಿಪ್ರಿಯ, ಉಮಾಶ್ರೀ, ರಂಗಾಯಣ ರಘು, ಸುಧಾಕರ್, ಚಿತ್ರಾ ಶೆಣೈ ಮುಂತಾದವರ ತಾರಾಗಣವಿದೆ.