ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಡಿಯೋ ಕ್ಯಾಸೆಟ್ ಬಿಡುಗಡೆ
ಸುದ್ದಿ/ಗಾಸಿಪ್
Feedback Print Bookmark and Share
 
ಕ್ರಿಸ್ಮಸ್ ಸಮೀಪಿಸುತ್ತಿದ್ದಂತೆ ಕ್ರೈಸ್ತ ಬಾಂಧವರ ಆರಾಧ್ಯಮೂರ್ತಿ ಯೇಸುವನ್ನು ಕುರಿತ ಮುರು ಧ್ವನಿಸುರುಳಿಗಳು ಹಾಗೂ ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆಗಳ ಧ್ವನಿಸುರುಳಿ ಸೇರಿದಂತೆ ನಾಲ್ಕು ಆಡಿಯೋ ಕ್ಯಾಸೆಟ್‌ಗಳನ್ನು ಜಂಕಾರ್ ಸಂಸ್ಥೆ ಈ ವಾರ ಬಿಡುಗಡೆ ಮಾಡಿದೆ.

ಧರೆಯ ಬೆಳಕು
ಎ. ವಾರಿಯರ್ ಹಾಡಿರುವ ಒಳ್ಳೆಯ ಕುರುಬ ಗೀತೆಯೊಂದಿಗೆ ಶುರುವಾಗುವ ಈ ಧ್ವನಿಸುರುಳಿಯಲ್ಲಿ ಒಟ್ಟು 8 ಭಕ್ತಿಗೀತೆಗಳಿವೆ. ಈ ಪೈಕಿ 5 ಗೀತೆಗಳನ್ನು ವಾರಿಯರ್ ಅವರೇ ಹಾಡಿದ್ದಾರೆ. ಭೂಮಿಯಮೇಲೆ ಗೀತೆಯನ್ನು ಸುಂದರ್ ಮತ್ತು ಅಶ್ವಿನಿ ಹಾಡಿದ್ದಾರೆ. ದುಃಖವು ಕಹಿ ಎಂದು ಮತ್ತು ಉಸಿರಲ್ಲಿ ಯೇಸುವೆ ಗೀತೆಗಳನ್ನು ಹಾಡಿದ್ದಾರೆ. ಬ್ರದರ್, ವೀರೇಶ್ ರಚಿಸಿರುವ ಈ ಗೀತೆಗಳಿಗೆ ಬ್ರದರ್, ಜೋಸಫ್ ಸಂಗೀತ ಸಂಯೋಜಿಸಿದ್ದಾರೆ. ಇದರ ದರ: 30 ರೂ.

ಯೇಸುವೇ ನನ್ನ ದೇವರು
ಈ ಧ್ವನಿ ಸುರುಳಿಯಲ್ಲಿ ಯೇಸು ಕುರಿತ ಎಂಟು ಭಕ್ತಿಗೀತೆಗಳಿವೆ. ಈ ಪೈಕಿ ಯೇಸುವೆ ಮರೆಯದಿರು, ಸುಳ್ಳಾನೆ ಮಾಡದಿರು, ಮನೆಯ ಯಜಮಾನ ಹಾಗೂ ಈ ಲೋಕದಲ್ಲಿ ಗೀತೆಗಳನ್ನು ಗಾಯಕ ಸುಂದರ್ ಹಾಡಿದ್ದಾರೆ. ಪರಲೋಕ ತಂದೆ, ಧರೆಗಿಳಿದು ಬಂದಳಿ, ಲೋಕ ಪಿತನೆ ಯೇಸು ಗೀತೆಗಳನ್ನು ಖ್ಯಾತ ಹಿನ್ನೆಲೆ ಗಾಯಕ ರಮೇಶ್ಚಂದ್ರ ಹಾಡಿದ್ದಾರೆ. ವೀರೇಶ್ ಬೆಲಗಾಲಪೇಟೆ ರಚಿಸಿರುವ ಈ ಭಕ್ತಿ ಸಾಹಿತ್ಯಕ್ಕೆ ಸಾಮ್ರಾಟ್ ಸಂಗಿತ ಸಂಯೋಜಿಸಿದ್ದಾರೆ. ಇದರ ಮಾರಾಟ ದರ: 30 ರೂ.

ದೇವಕುಮಾರ ಯೇಸು
ಗಾಯಕರಾದ ಬ್ರದರ್ ಹಾಗೂ ಸುಂದರ್ ಹಾಡಿರುವ ಯೇಸು ನಿನ್ನ ವಾಕ್ಯವು ಗೀತೆಯೊಂದಿಗೆ ಶುರುವಾಗುವ ಈ ಸಂಪುಟದಲ್ಲಿ ಯೇಸುವನ್ನು ಕುರಿತ 8 ಭಕ್ತಿ ಗೀತೆಗಳಿವೆ. ಎಂಥಾ ಅದ್ಬುತವು, ದಯೆಯೇ ಧರ್ಮ ಹಾಗೂ ಹುಣ್ಣಿಮೆ ರಾತ್ರಿಯಲ್ಲಿ ಗೀತೆಗಳನ್ನು ಇದೇ ಜೋಡಿ ಹಾಡಿದ್ದಾರೆ. ಶಿಲುಬೆ ಮೇಲೆ ಮತ್ತು ಪರಲೋಕ ಗೀತೆಗಳನ್ನು ರಮೇಶ್ಚಂದ್ರ ಹಾಡಿದ್ದಾರೆ. ಅದ್ಬುತ ಕರ್ತಳಿ ಮತ್ತು ಸರ್ವರ ಪಾಪ ಗೀತೆಗಳನ್ನು ಶಮಿತಾ ಹಾಡಿದ್ದಾರೆ. ಬ್ರದರ್ ವೀರೇಶ್ ರಚಿಸಿರುವ ಈ ಭಕ್ತಿ ಸಾಹಿತ್ಯಕ್ಕೆ ಬ್ರದರ್ ಹಾಗೂ ಸಾಮ್ರಾಟ್ ಸಂಗೀತ ಸಂಯೋಜಿಸಿದ್ದಾರೆ. ಇದರ ಮಾರಾಟ ದರ: 30 ರೂ.

ಅಮರಜ್ಯೋತಿ ಶ್ರೀ ಅಯ್ಯಪ್ಪ
ಡಾ. ರಾಜಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ ಕುರಿತ ಭಕ್ತಿಗೀತೆಗಳನ್ನು ಈ ಧ್ವನಿಸುರುಳಿಯಲ್ಲಿ 10 ಭಕ್ತಿ ಗೀತೆಗಳಿವೆ ನೆತ್ತಿ ಮೇಲೆ ಇರುಮುಡಿ, ಅರಿತವನು ನೀನು, ಭಯದಿಂದ ಭಕ್ತಿ ಬೇಡ, ಲೋಕದಲ್ಲಿ ದೊಡ್ಡ ತತ್ವಜ್ಞಾನಿ ಎನ್ನೆಯ ತನುವೇ ಹಾಗು ಎನ್ನ ಕಾಲಿಗೆ ಕಟ್ಟಿದ ಗುಂಡು ಗೀತೆಗಳನ್ನು ಡಾ. ರಾಜ್ ಕುಮಾರ್ ಹಾಡಿದ್ದು, ಸ್ವಾಮಿ ಬಂದನೋ ಗೀತೆಯನ್ನು ಡಾ. ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಹಾಡಿದ್ದಾರೆ. ಬ್ರಾಹ್ಮಿ ಮುಹೂರ್ತದಲ್ಲಿ, ಶರಣು ಬಂದೆನು ಗೀತೆಗಳನ್ನು ರಾಘವೇಂದ್ರ ರಾಜ್‌ಕುಮಾರ್ ಹಾಡಿದ್ದಾರೆ. ಈ ಗೀತೆಗಳನ್ನು ರಚಿಸಿ ಸಂಗೀತ ಸಂಯೋಜಿಸಿರುವವರು ಖ್ಯಾತ ಸಂಗಿತ ನಿರ್ದೇಶಕ ವಿ. ಮನೋಹರ್. ಈ ಧ್ವನಿ ಸುರುಳಿ ಮಾರಾಟ ದರ 30 ರೂ.