ಬ್ಯಾಂಕಾಕ್‌ನಿಂದ ಫ್ರೆಂಡ್ಸ್ ವಾಪಸ್
ಬೆಂಗಳೂರು, ಶನಿವಾರ, 22 ಡಿಸೆಂಬರ್ 2007( 11:22 IST )
ನಿರ್ಮಾಣ ನಿರ್ವಾಹಕರಾಗಿ ಕನ್ನಡ ಚಿತ್ರೋದ್ಯಮದಲ್ಲಿ ಹೆಸರು ಮಾಡಿರುವ ಎನ್.ಎಸ್.ಕುಮಾರ್ ನಿರ್ಮಿಸುತ್ತಿರುವ ಫ್ರೆಂಡ್ಸ್ ಭಾಗ 2 ಚಿತ್ರತಂಡ ಇದೀಗ ಬೆಂಗಳೂರಿಗೆ ಮರಳಿದೆ.
ಬ್ಯಾಂಕಾಕ್‌ನಲ್ಲಿ ಅದ್ದೂರಿ ಮುಹೂರ್ತ ಆಚರಿಸಿಕೊಂಡು ಚಿತ್ರೀಕರಣ ಆರಂಭಿಸಿದ್ದ ಈ ಚಿತ್ರತಂಡ ವಾಪಸಾಗಿದೆ. ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆಯನ್ನೂ ಕುಮಾರ್ ಹೊತ್ತಿದ್ದಾರೆ.
ರೇಣು ಛಾಯಾಗ್ರಹಣ, ರಾಜು ಊಡಿನಗೆರೆ ಸಂಗೀತ, ಶ್ಯಾಂ ಸಂಕಲನ, ಎಂ.ಎಸ್. ನರಸಿಂಹಮೂರ್ತಿ ಸಂಭಾಷಣೆ, ಇಸ್ಮಾಯಿಲ್ ಕಲೆ, ರವಿವರ್ಮ ಸಾಹಸ, ರಮೇಶ್‌ಬಾಬು, ರಾಮು ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.
ವಾಸು, ಆನಂದ್, ಶರಣ್, ಶ್ಯಾಂ, ಋತಿಕಾ, ಬ್ಯಾಂಕ್ ಜನಾರ್ಧನ್, ರೇಖಾದಾಸ್, ಟೆನ್ನಿಸ್ ಕೃಷ್ಣ ಮತ್ತಿತರರು ತಾರಾಗಣದಲ್ಲಿದ್ದಾರೆ.