ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರೀಮೇಕ್ ಚಿತ್ರ ಪತ್ತೆಗೊಂದು ಸಮಿತಿ
ಸುದ್ದಿ/ಗಾಸಿಪ್
Feedback Print Bookmark and Share
 
ಒಂದು ಚಿತ್ರ ಷೂಟಿಂಗ್ ಆರಂಭವಾದರೆ ಅದರ ಕಥೆ ಗುಟ್ಟಾಗಿಡುವುದು ಕೆಲ ನಿರ್ದೇಶಕರ ಹಾಗೂ ನಿರ್ಮಾಪಕರ ಅಭ್ಯಾಸ.

ತಮ್ಮ ಚಿತ್ರದ ಕತೆ ಅಥವಾ ಕತೆಯ ಎಳೆ ಹೇಳಿದರೆ ಇತರ ಚಿತ್ರ ತಯಾರಕರು ತಮ್ಮ ಚಿತ್ರ ಬಿಡುಗಡೆಯಾಗುವ ಮುನ್ನವೇ ಅದನ್ನು ತಮ್ಮ ಚಿತ್ರದಲ್ಲಿ ಅಳವಡಿಸಿಕೊಳ್ಳುತ್ತಾರೆ ಎಂಬುದು ಅವರ ಭೀತಿ.

ಆದರೆ ಆ ಕತೆ ನಮ್ಮದು ಎಂದು ವಾದ ಮಂಡಿಸಿ ವಿವಾದವಾಗುವುದೂ ಚಿತ್ರರಂಗದಲ್ಲಿ ಸಾಮಾನ್ಯ. ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಉತ್ತೇಜನ ನೀಡಲು ಸರ್ಕಾರ ಒದಗಿಸಿರುವ ತೆರಿಗೆ ವಿನಾಯಿತಿಯನ್ನು ಪಡೆಯಬೇಕಾದರೆ ಆ ಚಿತ್ರ ಸ್ವಮೇಕ್ ಆಗಿರಬೇಕು ಎಂಬುದು ಸರ್ಕಾರದ ನಿಯಮ.

ಆದರೆ ಕೆಲ ಇತರ ಭಾಷಾ ಚಿತ್ರಗಳ ಕಥೆಗಳನ್ನು ತಿರುವು ಮುರುವು ಮಾಡಿ ಕೆಲ ಬದಲಾವಣೆಗಳೊಂದಿಗೆ ತಮ್ಮದು ಒರಿಜಿನಲ್ ಕನ್ನಡ ಚಿತ್ರ ಎಂದು ಸರ್ಕಾರಕ್ಕೆ ಅರ್ಜಿ ಹಾಕಿ ತೆರಿಗೆ ವಿನಾಯಿತಿ ಸೌಲಭ್ಯವನ್ನು ಪಡೆಯುವುದುಂಟು.

ಆದರೆ ಒಂದು ಚಿತ್ರ ಬಿಡುಗಡೆಯಾದರೆ ಅದು ಸ್ವಮೇಕಾ ರೀಮೇಕಾ ಎಂದು ನಿರ್ಧರಿಸುವುದು ಅಧಿಕಾರಿಗಳಿಗೆ ತಲೆನೋವಿನ ಕೆಲಸವಾಗಿತ್ತು. ಸ್ವತಃ ನಿರ್ಮಾಪಕರಾಗಿರುವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೀಮೇಕು ಚಿತ್ರಗಳಿಗೂ ತೆರಿಗೆ ವಿನಾಯಿತಿ ಸೌಲಭ್ಯ ನೀಡುವ ಭರವಸೆ ನೀಡಿದ್ದರು. ಅವರು ಮುಖ್ಯಮಂತ್ತಿ ಹುದ್ದೆಯಿಂದ ಕೆಳಗಿಳಿದನಂತರ ಆ ಭರವಸೆಯೂ ಹೋಯಿತು.

ಇತ್ತೀಚಿಗೆ ಚೆಲುವಿನ ಚಿತ್ತಾರ ಎಂಬ ಚಿತ್ರವನ್ನು ಎಸ್. ನಾರಾಯಣ್ ತಮ್ಮ ನಿರ್ದೇಶನದಲ್ಲಿ ನಿರ್ಮಿಸಿದ್ದರು. ತಮ್ಮ ಚಿತ್ರಕ್ಕೆ ತೆರಿಗೆ ವಿನಾಯಿತಿ ಲಭಿಸುತ್ತದೆ ಎಂದು ಅವರು ತುಂಬಾ ವಿಶ್ವಾಸದಿಂದ ಇದ್ದರು. ಈ ಮಧ್ಯೆ ರೀಮೇಕ್ ಚಿತ್ರಗಳನ್ನು ಪತ್ತೆ ಹಚ್ಚುವುದಕ್ಕೆಂದೇ ಸರ್ಕಾರ ಒಂದು ಸಮಿತಿಯನ್ನು ನೇಮಕಮಾಡಲಿದೆ ಎಂಬ ಸುದ್ದಿ ಹರಡಿದೆ.

ಆದರೆ ಇದನ್ನು ಸರ್ಕಾರದ ಮೂಲಗಳು ಖಚಿತಪಡಿಸುತ್ತಿಲ್ಲವಾದರೂ ಅಂಥ ಸಮಿತಿಯಲ್ಲಿ ಸದಸ್ಯತ್ವ ಪಡೆಯಲು ಕೆಲವರು ಮುಂದಾಗಿದ್ದಾರೆ ಎಂಬುದು ಗಾಂಧಿನಗರದ ಸುದ್ದಿ.