ತಾಜ್‌ಮಹಲ್ ನೋಡಿ ಸಿನೆಮಾ ಟೈಟಲ್
ಬೆಂಗಳೂರು, ಶನಿವಾರ, 22 ಡಿಸೆಂಬರ್ 2007( 11:25 IST )
ಚಿತ್ರಗಳ ಟೈಟಲ್ ಇಡುವುದರ ಸಂಬಂಧ ಕೆಲ ವಿಚಿತ್ರಗಳು ನಡೆಯುತ್ತವೆ. ಸಿನೆಮಾಗಳ ಟೈಟಲ್‌ಗಳಿಗಾಗಿ ವಿವಾದವೇರ್ಪಟ್ಟಿದ್ದು ಉಂಟು. ಕನ್ನಡದಲ್ಲಿ ನಾಲ್ಕೈದು ವರ್ಷಗಳ ಹಿಂದೆ ತಾಜ್‌ಮಹಲ್ ಎಂಬ ಟೈಟಲ್ ನೋಂದಣಿಯಾಗಿತ್ತು.
ಆ ಚಿತ್ರ ಆರಂಭವಾಗಲೇ ಇಲ್ಲ. ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಅದೇ ಹೆಸರಿನ ಚಿತ್ರಗಳು ತಯಾರಾದವು. ಆದರೆ ಆ ಚಿತ್ರಗಳು ಸೋತವು. ಇತ್ತೀಚಿಗೆ ತಾಜ್‌ಮಹಲ್ ಚಿತ್ರದ ಷೂಟಿಂಗ್ ಆರಂಭವಾಯಿತು. ಇನ್ನು ಅದು ರೀಲೀಸ್ ಆಗುವವರೆಗೆ ಆ ಹೆಸರಿನ ಕುರಿತ ಚರ್ಚೆ ಮುಂದುವರೆಯುತ್ತದೋ ಎನೋ.
ಈ ಚಿತ್ರ ಪ್ರಾರಂಭವಾಗುವ ಮೊದಲು ಈ ಚಿತ್ರಕ್ಕೆ ಐ ಮಿಸ್ ಯು ಎಂದು ಹೆಸರಿಟ್ಟಿದ್ದರಂತೆ. ಅದೇ ಹೆಸರು ಇನ್ಯಾರೋ ಹೆಸರಿನಲ್ಲಿ ನೋಂದಣಿಯಾಗಿತ್ತು. ಟೈಟಲ್ ಬಗ್ಗೆ ತಲೆ ಕೆಡಿಸಿಕೊಳ್ಳದ ಚಿತ್ರ ತಂಡ ಕುಲುಮನಾಲಿಗೆ ಹೋಗಿ ಲೊಕೇಶನ್ ನೋಡಿ ವಾಪಸ್ಸು ಬರುತ್ತಿತ್ತು. ಮಧ್ಯೆ ಆಗ್ರಾಗೆ ತೆರಳಿತ್ತು.
ಆಗ ನಿರ್ದೇಶಕರಿಗೆ ಹೊಳೆಯಿತು ನೋಡಿ ತಾಜ್‌ಮಹಲ್ ಹೆಸರು. ನಿರ್ದೇಶಕ ಚಂದ್ರಶೇಖರ್ ತಮ್ಮ ಚಿತ್ರದ ಕಥೆ ಹೇಳಲು ಇಚ್ಛೆ ವ್ಯಕ್ತಪಡಿಸಲಿಲ್ಲ. ತಮ್ಮ ಮನೆಯಲ್ಲಾದ ಸಣ್ಣ ಸಣ್ಣ ಘಟನೆಗಳನ್ನಿಟ್ಟುಕೊಂಡು ಕಥೆ ಹೆಣೆದಿರುವುದಾಗಿ ಹೇಳಿದರು.
ಈ ಚಿತ್ರದಲ್ಲಿ ನಾಯಕನಾಗಿ ಸುನೀಲ್ ಹಾಗೂ ನಾಯಕಿಯಾಗಿ ಪ್ರಜಾ ಅಭಿನಯಿಸುತ್ತಾರೆಂದು ಪ್ರಚಾರವಾಗಿತ್ತು. ಆದರೆ ಏನಾಯಿತೋ ಗೊತ್ತಿಲ್ಲ. ನಾಯಕನ ಸ್ಥಾನಕ್ಕೆ ಅಜಯ್ ಬಂದಿದ್ದಾರೆ.