ಗಂಗಾ ಕಾವೇರಿಗೆ ಕೊಡವರ ಕೋಲು
ಬೆಂಗಳೂರು, ಮಂಗಳವಾರ, 25 ಡಿಸೆಂಬರ್ 2007( 15:02 IST )
ಕರ್ನಾಟಕ ಕನ್ನಡ ನಾಡಾದರೂ ರಾಜ್ಯದ ವಿವಿಧೆಡೆ ವಿವಿಧ ಭಾಷಿಕರು ನೆಲೆಗೊಂಡಿದ್ದಾರೆ. ಕನ್ನಡ ಸಿನೆಮಾಗಳಲ್ಲಿ ಇಂಥ ಉಪಭಾಷೆಗಳ ಪ್ರಯೋಗಗಳನ್ನು ಕೆಲವರು ಮಾಡಿರುವುದುಂಟು.
ಅಕ್ಷಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಗಂಗಾ ಕಾವೇರಿ ಚಿತ್ರಕ್ಕಾಗಿ ಕೊಡವ ಭಾಷೆ ಬಳಿಸಿಕೊಂಡು ಗೀತೆಯೊಂದನ್ನು ಪ್ರೇಮಕವಿ ಕಲ್ಯಾಣ್ ರಚಿಸಿದ್ದಾರೆ. ಕೊಡವರ ಕೋಲು, ಹುತ್ತರಿ ಡೋಲು... ಎಂದು ಪ್ರಾರಂಭವಾಗುವ ಗೀತೆಯನ್ನು ಅಕ್ಷಯ್, ಮಲ್ಲಿಕಾ ಕಪೂರ್, ರಮೇಶ್ ಭಟ್, ಅನಂತನಾಗ್ ಚಿತ್ರಾ ಶೆಣೈ ಅಭಿನಯದಲ್ಲಿ ನಿರ್ದೇಶಕ ವಿಷ್ಣುಕಾಂತ್ ಚಿತ್ರೀಕರಿಸಿಕೊಂಡರು.
50ಕ್ಕೂ ಹೆಚ್ಚು ನೃತ್ಯ ಕಲಾವಿದರು ಹಾಗೂ 150ಕ್ಕೂ ಹೆಚ್ಚು ಕೊಡಗಿನ ಸಹ ನೃತ್ಯಗಾರರು ಕುಣಿದ ಈ ಹಾಡನ್ನು ಮಡಿಕೇರಿ ಬಳಿಯಿರುವ ಕುದರೆಕಟ್ಟು ಬಳಿ ಚಿತ್ರೀಕರಿಸಿಕೊಂಡರು ನಿರ್ದೇಶಕ ವಿಷ್ಣುಕಾಂತ್. ಈ ಚಿತ್ರಕತೆಯೂ ವಿಷ್ಣು ಅವರದೇ. ಎಚ್.ಸಿ. ವೇಣು ಛಾಯಾಗ್ರಹಣ, ಕೆ. ಕಲ್ಯಾಣ್ ಗೀತ ರಚನೆ ಹಾಗೂ ಸಂಗೀತವಿದೆ. ಬಿ.ಎ.ಮಧು ಸಂಭಾಷಣೆ ರಚಿಸಿದ್ದಾರೆ.
ಚಿತ್ರದ ತಾರಾಬಳಗದಲ್ಲಿ ಅಕ್ಷಯ್, ಮಲ್ಲಿಕಾ ಕಪೂರ್, ಮಾಯಿ, ಅನಂತನಾಗ್, ರೂಪಾದೇವಿ, ತಾರಾ, ಪತ್ರಕರ್ತರಾದ ಗಣೇಶ್ ಕಾಸರಗೋಡು ಹಾಗೂ ಬಿ. ಗಣಪತಿ, ಶರಣ್, ಚಿತ್ರಾ ಶೆಣೈ, ರಮೇಶ್ ಭಟ್ ಇದ್ದಾರೆ.