ಹೃದಯಗಳ ವಿಷಯ ಮುಂದಿನ ತಿಂಗಳು ಚಿತ್ರೀಕರಣ
ಬೆಂಗಳೂರು, ಮಂಗಳವಾರ, 25 ಡಿಸೆಂಬರ್ 2007( 15:03 IST )
ಮಿಸ್ಟರ್ ಬಕ್ರಾ ಚಿತ್ರ ನಿರ್ದೇಶಕ ವಸಂತ್ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿದೇಶಿಸುತ್ತಿರುವ ಹೃದಯಗಳ ವಿಷಯ ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ಆರಂಭವಾಗಲಿದೆ.
ಫ್ರೆಂಡ್ಸ್ ಸಿನಿ ಕಂಬೈನ್ಸ್ ಲಾಂಛನದಲ್ಲಿ ಬಸವರಾಜ್ ರಂಟ್ವಾಳ್, ಹನುಮಂತರಾಯಪ್ಪ, ಅಜಳಗುಂಟೆ, ಕಣ್ಣನ್ ಕೂಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಒರಟ ಐ ಲವ್ ಯು ಚಿತ್ರದ ನಾಯಕ ಪ್ರಶಾಂತ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಯಕಿ ಹಾಗೂ ಉಳಿತ ತಾರಾಗಣದ ಆಯ್ಕೆ ನಡೆಯುತ್ತಿದೆ. ಚಿತ್ರಕ್ಕೆ ಡ್ರಮ್ಸ್ ದೇವ ಸಂಗೀತ ನೀಡುತ್ತಿದ್ದಾರೆ. ಶೀಘ್ರದಲ್ಲೇ ಹಾಡಿನ ಧ್ವನಿಮುದ್ರಣ ಕಾರ್ಯ ನಡೆಯಲಿದೆ.