ನಂದ ಲವ್ಸ್ ನಂದಿತಾಗೆ ಕೋ ಕೋ ಕೋಳಿ
ಬೆಂಗಳೂರು, ಮಂಗಳವಾರ, 25 ಡಿಸೆಂಬರ್ 2007( 15:04 IST )
ಅಭಿನಯಶ್ರೀ ಅವರೊಂದಿಗೆ ಶೋಭಾ, ಡೈಮಂಡ್ ರಾಜಣ್ಣ, ರಮೇಶ್ ಬೇಬಿ ನಿಖಿತ, ಮಾಸ್ಟರ್ ಶ್ರೀನಿವಾಸ ಪ್ರಸಾದ್ ಅಭಿನಯದಲ್ಲಿ ಕೋ ಕೋ ಕೋ ಕೋಳಿ... ಎಂದು ಸಾಗುವ ಹಾಡನ್ನು ನಂದ ಲವ್ಸ್ ನಂದಿತಾ ಚಿತ್ರಕ್ಕಾಗಿ ನಿರ್ದೇಶಕ ವಿಜಯಕುಮಾರ್ ಚಿತ್ರೀಕರಿಸಿಕೊಂಡಿದ್ದಾರೆ.
ಖ್ಯಾತ ಕ್ಯಾಬರೆ ನೃತ್ಯಗಾರ್ತಿ ಅನುರಾಧಾ ಅವರ ಪುತ್ರಿ ಅಭಿನಯಶ್ರೀ ಹೆಜ್ಜೆಹಾಕಿದ ಈ ಹಾಡು ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸುತ್ತದೆ ಎಂಬುದು ನಿರ್ದೇಶಕರ ವಿಶ್ವಾಸ.
ಸಿಂಹಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.