ಮುನಿಯಾಗೆ ಹಾಡುಗಳ ಧ್ವನಿಮುದ್ರಣ
ಬೆಂಗಳೂರು, ಮಂಗಳವಾರ, 25 ಡಿಸೆಂಬರ್ 2007( 15:05 IST )
ತಾವರೆಕೆರೆ ಎಂ.ಮುನಿರಾಜ್ - ರಾಜ್‌ಗೋಪಾಲರೆಡ್ಡಿ ಸದ್ಗುರು ಎಂಟರ್ಟೈನರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಮುನಿಯಾ ಚಿತ್ರಕ್ಕೆ ತ್ಯಾಗರಾಜನಗರದ ಲಂಡನ್ ಚಂದ್ರು ಸ್ಟುಡಿಯೋದಲ್ಲಿ ಎತ್ತಾಕ್ ಮಚ್ಚಿ ಎತ್ತಾಕ್... ಎಂದು ಸಾಗುವ ಹಾಡಿನ ಧ್ವನಿಮುದ್ರಣ ನಡೆಯುತು.
ಟಿ.ನಾಗಚಂದ್ರ ನಿರ್ದೇಶಿಸುತ್ರಿರುವ ಈ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಅಭಿಮಾನ್ ಸಂಗೀತವಿದೆ. ಮಯೂರ್ ಪಟೇಲ್, ರಂಗಾಯಣ ರಘು, ಮೈಕೋ ನಾಗರಾಜ್, ಕೋಟೆ ಪ್ರಭಾಕರ್ ಮುಂತಾದವರು ಅಭಿನಯಿಸಲಿರುವ ಈ ಚಿತ್ರ ಶೀಘ್ರದಲ್ಲೇ ಆರಂಭಗೊಳ್ಳಲಿದೆ.
ಉಳಿದ ತಾರಾಗಣ ಹಾಗು ತಾಂತ್ರಿಕ ವರ್ಗದ ಆಯ್ಕೆ ಅಂತಿಮ ಹಂತದಲ್ಲಿದೆ.