ಲೈಫ್‌ಗೆ ದ್ವಿತೀಯ ಹಂತದ ಚಿತ್ರೀಕರಣ
ಬೆಂಗಳೂರು, ಮಂಗಳವಾರ, 25 ಡಿಸೆಂಬರ್ 2007( 15:08 IST )
ಶ್ರೀ ಶಿರಡಿ ಸಾಯಿ ಕೃಪಾಲಯ ಫಿಲಿಂಸ್ ಲಾಂಛನದಲ್ಲಿ ಸಾಯಿ ಕಲ್ಲೇಶ್ ನಿರ್ದೇಶಿಸುತ್ತಿರುವ, ಬೀದರ್ ಮೂಲದ ಸಮೀಉದ್ದೀನ್ ಬಡೇಲಿ, ಗೀರೀಶ್ ಖಾಜಿ ಮಹಮದ್ ಉಲ್ಲಾ ಖಾನ್ ಕೂಡಿ ನಿರ್ಮಿಸುತ್ತಿರುವ ರಾಗಶ್ರೀ ಕಾರ್ಯಕಾರಿ ನಿರ್ಮಾಪಕಿ ಯಾಗಿರುವ ಲೈಫ್ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಈ ತಿಂಗಳ 22ರಿಂದ ನಡೆಯುತ್ತಿದೆ.
ಈಗಾಗಲೇ ಬೆಂಗಳೂರಿನ ಸುತ್ತಮುತ್ರ 20 ದಿನಗಳ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಕ್ಲೈಮಾಕ್ಸ್ ಹಾಗೂ ಹಾಡುಗಳ ಚಿತ್ರಣ ಮಡಿಕೇರಿ, ಚಿಕ್ಕಮಗಳೂರು, ಸಕಲೇಶಪುರದ ರಮ್ಯ ಹೊರಾಂಗಣದಲ್ಲಿ ನಡೆಯಲಿದೆ.
ರಾಜು ಉಪೇಂದ್ರ ಅವರ ಸಂಗೀತ, ದೊಡ್ಡರಂಗೇಗೌಡರ ಗೀತ ರಚನೆಯಿರುವ ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆಯನ್ನು ನಿರ್ದೆಶಕ ಸಾಯಿ ಕಲ್ಲೇಶ್ ಅವರೇ ರಚಿಸಿದ್ದಾರೆ. ಅಮಿತ್ ರಾಜ್, ಆಶಿತಾ, ಪೃಥ್ವಿರಾಜ್, ವಿದ್ಯಾ ಬೆಳಗಾವಿ, ರಕ್ಷಾ ಪ್ರಮುಖ ತಾರಾಗಣದಲ್ಲಿದ್ದಾರೆ.