ಕೀರ್ತಿ ಹಾಡು ಚಿತ್ರೀಕರಣ
ಬೆಂಗಳೂರು, ಬುಧವಾರ, 26 ಡಿಸೆಂಬರ್ 2007( 18:27 IST )
ಶ್ರೀಗಣೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಪ್ರಥಮ ಚಿತ್ರ ಕೀರ್ತಿ ಚಿತ್ರಕ್ಕಾಗಿ ನಾಯಕ ವರದ ಹಾಗೂ ಹೀರೋಯಿನ್ ನಿಖಿತ ಅಭಿನಯದಲ್ಲಿ ಒಂದು ಗೀತೆಯನ್ನು ಇತ್ತೀಚಿಗೆ ನಗರದಲ್ಲಿ ಚಿತ್ರಿಕರಿಸಿಕೊಳ್ಳಲಾಯಿತು.
ರಘು ಉರ್ಡಿಗೆರೆ ಅವರು ಈ ಚಿತ್ರದ ಸಂಗಿತ ನಿರ್ದೇಶಕರು. ಜಯರಾಮಯ್ಯ ನಿರ್ಮಿಸುತ್ತಿರುವ ಈ ಚಿತ್ರದ ಇತರ ತಾರಾಗಣದಲ್ಲಿ ಕಿಲ್ಲರ್ ವೆಂಕಟೇಶ್, ಪ್ರಸನ್ನ, ಮೈಕೋ ನಾಗರಾಜ್, ವಾಸ್ತು ವೆಂಕಟೇಶ್ ಮುಂತಾದವರಿದ್ದಾರೆ.
ನಾಯಕನಾಗಿ ಅಭಿನಯಿಸುತ್ತಿರುವ ವರದರಾಜ್ ನಿರ್ದೇಶನದೊಂದಿಗೆ ಕತೆ, ಚಿತ್ರಕತೆ ಹಾಗೂ ಸಂಭಾಷಣೆಯ ಹೊಣೆಯನ್ನೂ ಹೊತ್ತಿದ್ದಾರೆ.