ಓ ಮನಸೇ ಷೂಟಿಂಗ್
ಬೆಂಗಳೂರು, ಬುಧವಾರ, 26 ಡಿಸೆಂಬರ್ 2007( 18:28 IST )
ಧ್ಯಾನ್, ಜೆನ್ನಿಫರ್ ನಾಯಕ ನಾಯಕಿಯಾಗಿ ನಟಿಸುತ್ತಿರುವ ಓ ಮನಸೇ ಚಿತ್ರಕ್ಕಾಗಿ ಕುಂಬಳಗೋಡುವಿನ ಬಿಜಿಎಸ್ ಕಾಲೇಜಿನಲ್ಲಿ ಕೆಲ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು.
ನಾಯಕ, ನಾಯಕಿಯ ಜೊತೆ ವಿದ್ಯಾರ್ಥಿಗಳ ಸಮೂಹದೊಂದಿಗೆ ಸಹ ಕಲಾವಿದರು ಪಾಲ್ಗೊಂಡಿದ್ದ ದೃಶ್ಯಗಳ ಚಿತ್ರೀಕರಣ ನಡೆಯಿತು.
ಛಾಯಾಗ್ರಹಣ: ಜಗದೀಶ್ವ , ಕತೆ ಹಾಗೂ ಸಾಹಿತ್ಯ: ಉಳವಿ ಪ್ರಸಾದ್, ಸಂಭಾಷಣೆ: ಮಂಜು ಮಾಂಡವ್ಯ. ಇತರ ತಾರಾಗಣದಲ್ಲಿ ಅನಂತನಾಗ್, ವಿಶ್ವ, ಕೋಮಲ್, ಸಾಧುಕೋಕಿಲ, ರಂಗಾಯಣ ರಘು, ಸಹಿಕಹಿ ಚಂದ್ರು, ಸೀತಾ, ಚಿತ್ರಾ ಶೆಣೈ, ಮೈಸೂರು ರವಿ ಮುಂತಾದವರಿದ್ದಾರೆ.
ಶ್ರೀ ಚಂಪಕಧಾಮ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ವಿಶ್ವನಾಥ್ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶರಣ್ ಚಿತ್ರಕತೆ ರಚಿಸಿ, ನಿರ್ದೇಶನದೊಂದಿಗೆ ಪ್ರಥಮಬಾರಿಗೆ ಸಂಗೀತ ನೀಡುತ್ತಿದ್ದಾರೆ.