ಪಲ್ಲವಿ ಇಲ್ಲದ ಚರಣ ಚಿತ್ರೀಕರಣ ಮುಕ್ತಾಯ
ಬೆಂಗಳೂರು, ಬುಧವಾರ, 26 ಡಿಸೆಂಬರ್ 2007( 18:29 IST )
ಈ ಹೂವು ಈ ದುಂಬಿ ಒಂದಾದರೆ ಆ ಸ್ವರ್ಗ ಅಂಗೈಲಿತಾನೇ... ಎಂಬ ಹಾಡನ್ನು ಇತ್ತೀಚಿಗೆ ಹೊನ್ನಾವರ ಹಾಗೂ ಹೊಡಪೇಟೆಯಲ್ಲಿ ಪಲ್ಲವಿ ಇಲ್ಲದ ಚರಣ ಚಿತ್ರಕ್ಕಾಗಿ ಚಿತ್ರೀಕರಿಸಿಕೊಳ್ಳುವುದರೊಂದಿಗೆ ಚಿತ್ರೀಕರಣ ಮುಕ್ತಾಯಗೊಂಡಿತು.
ಎಸ್.ವಿ.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೊಸಪೇಟೆ ವಿನೋದ್ ಸಿಂಣ್, ಶಿವಪ್ರಭು ನಿರ್ದೇಶನದಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ನಾಗೇಶ್ವರರಾವ್ ಅವರ ಛಾಯಾಗ್ರಹಣ, ಅನಂತ ಪದ್ಮನಾಭ ಅವರ ಸಂಭಾಷಣೆ-ಸಹ ನಿರ್ದೇಶನ ಹಾಗೂ ಬಾಬ್ಜಿ ಸಂದೀಪ್ ಅವರ ಸಂಗೀತವಿದೆ.
ತಾರಾಗಣದಲ್ಲಿ ನಾಗಕಿರಣ್, ಪಾಯಲ್, ಲಂಬು ನಾಗೇಶ್, ಮಂಡ್ಯ ರಮೇಶ್, ಚಾರುಲತಾ, ಮಾಸ್ಟರ್ ಗೌತಮ್, ಬಾಲಕೃಷ್ಣ ಮುಂತಾದವರಿದ್ದಾರೆ.