ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದುರ್ಗಾದೇವಿ ಎದುರು ಮಿಂಚು
ಸುದ್ದಿ/ಗಾಸಿಪ್
Feedback Print Bookmark and Share
 
ಬೆಂಗಳೂರು ವಲಯದ ವಿದ್ಯಾರಣ್ಯಪುರದಲ್ಲಿರುವ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಮಿಂಚು ಮುಹೂರ್ತ ನಡೆಯಿತು.

ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಕ್ರಿಯೇಷನ್ಸ್ ಲಾಂಛನದಲ್ಲಿ ವೇಣುಗೋಪಾಲ ನಾಯಕ್ ಮತ್ತು ಸಹೋದರರು ನಿರ್ಮಿಸಿ, ವಿಶಾಲ್‌ರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಷಾಟ್‌ಗೆ ಮುಂಗಾರು ಮಳೆ ಚಿತ್ರದ ನಿರ್ಮಾಪಕ ಕೃಷ್ಣಪ್ಪ ಆರಂಭ ಫಲಕ ತೋರಿಸಿದರೆ, ಶಿವಾನಿ ಚಿತ್ರದ ನಿರ್ಮಾಪಕರಾದ ನೆ.ಗಿರಿಧರ್ ಕ್ಯಾಮರಾ ಚಾಲನೆ ಮಾಡಿದರು.

ನಾಯಕ ಸಿದ್ದಾರ್ಥ ಮತ್ತು ನಾಯಕಿಯರಾದ ಇಶಾ ಭಾಸ್ಕರ್ ಮತ್ತು ಜನಿತ್ಡುಡ ಅಭಿನಯಿಸಿದ ಪ್ರಥಮ ದೃಶ್ಯವನ್ನು ಇದೇ ಸಂದರ್ಭದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ಒಂದೇ ಹಂತದಲ್ಲಿ ಪೂರ್ಣಗೊಳ್ಳಲಿರುವ ಈ ಚಿತ್ರಕ್ಕೆ ಜೇಮ್ಸ್ ಅವರ ಛಾಯಾಗ್ರಹಣ, ವಿಲಿಯಂ ಅವರ ಸಂಗೀತವಿದೆ. ಪೋಷಕ ನಟಿ ತುಳಸಿ ಶಿವಮಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.