ಗಜ ರೀಮೇಕ್ ಅಲ್ಲ: ನಿರ್ದೇಶಕರ ಸ್ಪಷ್ಟನೆ
ಬೆಂಗಳೂರು, ಗುರುವಾರ, 27 ಡಿಸೆಂಬರ್ 2007( 15:17 IST )
ತೆಲುಗಿನ ಎಂ. ರಾಮಚಂದ್ರರಾವ್ ಅವರ ಕಾದಂಬರಿ ಆಧರಿತ ಚಿತ್ರವೊಂದನ್ನು ಮಾದೇಶ್ ನಿರ್ದೇಶಿಸುತ್ತಿದ್ದಾರೆ. ಅದರ ಹೆಸರು ಗಜ ದರ್ಶನ್ ಅಭಿನಯದ ಈ ಚಿತ್ರ ತೆಲುಗಿನ ಭದ್ರಂ ಚಿತ್ರದ ರೀಮೇಕ್ ಎಂಬುದು ಹಲವರ ಗುಮಾನಿ.
ಆ ಕಾದಂಬರಿಯ ಕನ್ನಡ ಅನುವಾದ ಓದಿದ ನಂತರ ಈ ಚಿತ್ರ ಮಾಡಲು ಅವರಿಗೆ ಸ್ಪೂರ್ತಿ ಬಂತು ಎಂದು ಅವರು ಹೇಳುತ್ತಾರೆ. ಗಜ ಚಿತ್ರಕ್ಕಾಗಿ ಸಿಟ್ಜರ್ಲ್ಯಾಂಡ್‌ನಲ್ಲಿ ಮೈನಸ್ 8 ಡಿಗ್ರಿ ಸೆಲ್ಷಿಯಸ್‌ನಲ್ಲಿ ಹಾಡುಗಳ ಚಿತ್ರೀಕರಣ ಮಾಡಲಾಗಿದೆ.
ದರ್ಶನ್ ಮತ್ತು ನವ್ಯನಾಯರ್ ಈ ಚಳಿಯಲ್ಲೂ ಪ್ರೇಕ್ಷಕರಿಗೆ ಬಿಸಿ ಏರುವಂತೆ ಕುಣಿದಿರುವುದು ವಿಶೇಷ. ಈ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆಯಂತೆ. ಈ ಚಿತ್ರದಲ್ಲಿ ಆಕ್ಷನ್ ಇದೆ, ಲವ್ ಇದೆ. ಕಾಮೆಡಿಯೂ ಇದೆ ಎಂಬುದು ನಿರ್ದೇಶಕರ ವಿವರಣೆ.