10ನೇ ಕ್ಲಾಸ್ ಏ ಸೆಕ್ಷನ್ ಶುರು
ಬೆಂಗಳೂರು, ಗುರುವಾರ, 27 ಡಿಸೆಂಬರ್ 2007( 15:19 IST )
ಮುಂದೆ ಎಲ್ಕೆಜಿ, ಯುಕೆಜಿ ಎಂಬ ಟೈಟಲ್‌ಗಳೊಂದಿಗೆ ಚಿತ್ರಗಳು ತಯಾರಾದರೂ ಆಶ್ಚರ್ಯ ಪಡಬೇಕಾಗಿಲ್ಲ.
ಈಗಾಗಲೇ ಪಿಯುಸಿ ನಿರ್ಮಾಣ ಹಂತದಲ್ಲಿದೆ. ಈಗ 10ನೇ ಕ್ಲಾಸ್ ಎ ಸೆಕ್ಷನ್ ಚಿತ್ರದ ಚಿತ್ರೀಕರಣ ಶುರುವಾಗಿದೆ.
ಚೆಲುವಿನ ಚಿತ್ತಾರ ಚಿತ್ರದಲ್ಲಿ ಶಾಲಾ ಬಾಲಕಿಯೊಬ್ಬಳು ಪ್ರೀತಿ ಮಾಡುವುದರ ಬಗ್ಗೆ ಸಾಕಷ್ಟು ವಿವಾದವೆದ್ದಿತ್ತು. ಈಗ 10ನೇಕ್ಲಾಸ್... ಚಿತ್ರದಲ್ಲೂ ಲವ್ ಸನ್ನಿವೇಶಗಳಿವೆ. ಈ ಚಿತ್ರವೂ ವಿವಾದದಲ್ಲಿ ಸಿಲುಕುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ.
ಈ ಚಿತ್ರದ ನಾಯಕಿ ಪ್ರಿಯಾಂಕಾ. ನಾಯಕ ನವೀನ್. ನಿರ್ಮಾಪಕರು ಪ್ರಕಾಶ್ ಕಲ್ಕೆರೆ ಮತ್ತು ರಾಕಿ. ನಿರ್ದೇಶಕ ವಿಲ್ ಸತ್ಯ. ಅಭಿಲಾಶ್ ಎಂದು ಹೆಸರು ಬದಲಾಯಿಸಿಕೊಂಡಿರುವ ಕೃಪಾಕರ್ ಆರ್ಯನ್ ಈ ಚಿತ್ರದ ಸಂಗಿತ ನಿದೇರ್ಶಕ. ತಾರಾ, ವನಿತಾವಾಸು, ಕರಿಬಸವಯ್ಯ ತಾರಾಗಣದಲ್ಲಿದ್ದಾರೆ.