ಇಂತಿ ನಿನ್ನ ಪ್ರೀತಿಯ ಚಿತ್ರತಂಡದ ಒಗಟ್ಟು ಪ್ರದರ್ಶನ
ಬೆಂಗಳೂರು, ಶುಕ್ರವಾರ, 28 ಡಿಸೆಂಬರ್ 2007( 13:06 IST )
ಯಾವುದಾದರೂ ಸಿನೆಮಾ ಅಥವಾ ಕಿರುತೆರೆ ಧಾರಾವಾಹಿ ಚಿತ್ರೀಕರಣ ಮುಗಿದಾಗ ಕಲಾವಿದರು ಹಾಗೂ ತಂತ್ರಜ್ಞರಿಗೆ ಇಷ್ಟು ದಿನ ಕುಟುಂಬ ಸದಸ್ಯರ ರೀತಿ ಇದ್ವಿ. ಆದರೆ ಒಬ್ಬರನ್ನೊಬ್ಬರು ಬಿಟ್ಟು ಹೋಗುವುದು ಹೇಗೆ ಎನ್ನುವ ಚಿಂತೆ ಕಾಡುತ್ತದೆ ಎಂದು ಹೇಳುವುದುಂಟು.
ನಿಜವಾಗಲೂ ಹಾಗೇ ಅನ್ಯೋನ್ಯವಾಗಿ ಇರುತ್ತಾರೆಯೇ? ಏನೋ ಗೊತ್ತಿಲ್ಲ. ಆದರೆ ಇಂತಿ ನಿನ್ನ ಪ್ರೀತಿಯ ಸಿನೆಮಾ ತಂಡದವರು ಮಾತ್ರ ಹಾಗೇ ಇದ್ದೆವು ಎಂದು ಹೇಳುವುದಕ್ಕಿಂತ ತೋರಿಸುವುದೇ ಒಳ್ಳೆಯದು ಎಂದು ನಿರ್ಧರಿಸಿದ್ದರು.
ಆ ತಂಡ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಗೆ ಚಿತ್ರತಂಡದ ಎಲ್ಲರೂ ಕರಿ ಷರ್ಟ್, ಬ್ಲೂ ಪ್ಯಾಂಟ್ ತೊಟ್ಟು ಬಂದಿದ್ದರು. ಇಂಥ ಸಮವಸ್ತ್ತ್ರ ಧರಿಸಬೇಕು ಎಂದು ನಿರ್ದೇಶಕ ಸೂರಿ ತಾಕೀತು ಮಾಡಿದ್ದರು. ಕೆಲವರಿಗೆ ಅವರ ಹಣದಿಂದಲೇ ಕರಿ ಷರ್ಟ್ ಹಾಗೂ ಬ್ಲೂ ಪ್ಯಾಂಟ್ ಕೊಡಿಸಿದ್ದರಂತೆ.