ತಬ್ಬಲಿ ಷೂಟಿಂಗ್ ಆರಂಭ
ಬೆಂಗಳೂರು, ಶುಕ್ರವಾರ, 28 ಡಿಸೆಂಬರ್ 2007( 13:10 IST )
ರಾಜಕಾರಣಿಗಳ ಮಕ್ಕಳು ರಾಜಕಾರಣಕ್ಕೆ ಇಳಿಯಬೇಕು, ಲಾಯರ್ ಮಕ್ಕಳು ಲಾಯರೇ ಆಗಬೇಕು, ನಟ ನಟಿಯರ ಮಕ್ಕಳು ಅಭಿನಯಕ್ಕೇ ಇಳಿಯಬೇಕು ಎಂಬ ನಿಯಮವೇನೂ ಇಲ್ಲದಿದ್ದರೂ ಅವರ ರಕ್ತದಲ್ಲಿ ತಂದೆ ತಾಯಿ ರಕ್ತ ಹರಿಯುತ್ತಿರುವುದರಿಂದ ಅದೇ ಹಾದಿ ಹಿಡಿಯುತ್ತಾರೆ ಎಂದು ಹೇಳಬಹುದು.
ಹಾಗೆ ಕನ್ನಡ ನಟರಾದ ಸತ್ಯಜಿತ್ ಹಾಗೂ ಭರತ್ ಭಾಗವತರ್ ಮಕ್ಕಳು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. ಆ ಚಿತ್ರದ ಹೆಸರು ತಬ್ಬಲಿ ಸ್ಲಂನಲ್ಲಿ ನಡೆಯುವ ಈ ಕಥೆ ಈ ರೀತಿ ಇದೆ. ಹೀರೋ ಆಗಿ ಸತ್ಯಜಿತ್ ಮಗ ಆಕಾಶ್ಜಿತ್, ಹೀರೋಯಿನ್ ಆಗಿ ಮೇಘಶ್ರೀ ಅಭಿನಯಿಸಲಿದ್ದಾರೆ.
ತಾವು ವಾಸ ಮಾಡುವ ಕೊಳಗೇರಿಯಲ್ಲಿ ದೊಡ್ಡದೊಂದು ಕಟ್ಟಡ ಕಟ್ಟಬೇಕು ಎನ್ನುವುದು ಅಲ್ಲಿನ ಜನರ ಆಸೆ. ಆದರೆ ಅವರ ಬಳಿ ದುಡ್ಡಿಲ್ಲ. ತಮ್ಮ ಆಸೆ ಪೂರೈಸಿಕೊಳ್ಳಲು ಸ್ಲಂ ಹಡುಗರು ದರೋಡೆ, ಕಳ್ಳತನಕ್ಕೆ ಇಳಿಯುತ್ತಾರೆ. ಹಾಗೆ ಶ್ರೀಮಂತರನ್ನು ವಂಚಿಸಲು ಮುಂದಾದಾಗ ತಬ್ಬಲಿ ಮಗುವೊಂದು ದೊರೆಯುತ್ತದೆ. ಹೀಗೆ ಚಿತ್ರದ ಕಥೆ ಮುಂದುವರೆಯುತ್ತದೆ.
ಈ ಚಿತ್ರದ ನಿರ್ಮಾಪಕ ಹೆಚ್.ಎಸ್. ಹರೂನ್, ನಿರ್ದೇಶಕ ಎನ್.ಲೋಕಿ. ಒಟ್ಟು ಐದು ಹಾಡುಗಳಿದ್ದು, ನೀಲ್ ಸಂಗೀತ ನೀಡುತ್ತಿದ್ದಾರೆ. ಸೋನು ನಿಗಮ್, ಉದಿತ್ ನಾರಾಯಣ್ ಮುಂತಾದವರು ಹಾಡಿದ್ದಾರೆ.
ಛಾಯಾಗ್ರಾಹಕ ಕೃಷ್ಣಕುಮಾರ್. ಮೈಸೂರಿನ ಕೊಳಗೇರಿ ಒಂದರಲ್ಲಿ ಷೂಟಿಂಗ್ ನಡೆಯಲಿದೆ. ನಂದಿತಾದಾಸ್ ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.