ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಿಂಚು ಚಿತ್ರೀಕರಣ
ಸುದ್ದಿ/ಗಾಸಿಪ್
Feedback Print Bookmark and Share
 
ಯಾವ ಚಿತ್ರ ಗೆಲ್ಲುತ್ತದೋ, ಯಾವ ಚಿತ್ರ ಸೋಲುತ್ತದೋ ಗೊತ್ತಿಲ್ಲ. ಅಂತೂ ಅನೇಕ ಕನ್ನಡ ಚಿತ್ರಗಳ ಮುಹೂರ್ತ ನೆರವೇರುತ್ತಿವೆ.

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಕ್ರಿಯೇಷನ್ಸ್ ಲಾಂಛನದಲಿ ವೇಣುಗೋಪಾಲ ನಾಯಕ್ ಮತ್ತು ಸಹೋದರರು ನಿರ್ಮಿಸಿ, ವಿಶಾಲ್‌ರಾಜ್ ನಿರ್ದೇಶಿಸುತ್ತಿರುವ ಮಿಂಚು ಚಿತ್ರಕ್ಕೆ ಬೆಂಗಳೂರು ಹೊರವಲಯದಲ್ಲಿರುವ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಮುಹೂರ್ತ ನೆರವೇರಿತು.

ಈ ಕೃಷ್ಣಪ್ಪ ಕ್ಲಾಪ್ ಮಾಡಿದರೆ ಗಿರಿಧರ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಸಿದ್ದಾರ್ಥ ಹೀರೋ ಆಗಿ ಇಶಾ ಭಾಸ್ಕರ್ ಮತ್ತು ಜನಿತ್ ಡುಡ್ ಅಭಿನಯದಲ್ಲಿ ನಿರ್ದೇಶಕ ವಿಶಾಲರಾಜ್ ಪ್ರಥಮ ದೃಶ್ಯ ಚಿತ್ರೀಕರಿಸಿಕೊಂಡರು.

ಒಂದೇ ಹಂತದಲ್ಲಿ ಈ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಲು ನಿರ್ಮಾಪಕ ಹಾಗೂ ನಿರ್ದೇಶಕರು ಸಜ್ಜಾಗಿದ್ದಾರೆ. ಛಾಯಾಗ್ರಹಣ: ಜೇಮ್ಸ್, ಸಂಗೀತ: ವಿಲಿಯಂ. ವಿಭಿನ್ನ ಹೃದಯಗಳ ಕಥೆಯ ಈ ಚಿತ್ರದಲ್ಲಿ ತುಳಸಿ, ಶಿವಮಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.