ಆನಂದ್‌ಗೆ ಎರಡನೇ ಚಿತ್ರ
ಬೆಂಗಳೂರು, ಶುಕ್ರವಾರ, 28 ಡಿಸೆಂಬರ್ 2007( 13:15 IST )
ಕಿರುತೆರೆಯಲ್ಲಿ ಪಟಪಟನೆ ಮಾತಾಡಿದರೆ ಸಿನೆಮಾ ಹೀರೋ ಆಗೋಕೆ ಸಾಧ್ಯಾನಾ ಎಂದು ಹಲವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಅದೇನೇ ಇರಲಿ. ಕಿರುತೆರೆಯಲ್ಲಿ ಮಾತನಾಡುವ ಮೂಲಕ ಗಣೇಶ್ ತನ್ನ ಪ್ರತಿಭೆ ತೋರಿ ಹಿರಿತೆರೆಗೆ ಜಿಗಿದು ಗೋಲ್ಡನ್ ಸ್ಟಾರ್ ಆದರು. ಈಗ ಯು 2 ಆನಂದ್ ಸರದಿ. ಅವರು ಈಗಾಗಲೇ ಮನಸುಗಳ ಮಾತು ಮಧುರ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದಿನ್ನೂ ರೀಲಿಸ್ ಆಗಿಲ್ಲ.
ಅದಕ್ಕೂ ಮುನ್ನವೇ ಸವಿಸವಿ ನೆನಪು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ನಾಯಕಿ ರಮ್ಯಾ ಬಾರ್. ಸಂಗೀತ ನಿದೇಶಕ ಎ.ಟಿ.ರಮೇಶ್. ನಿರ್ಮಾಪಕ ಸದಾನಂದ್. ಮುಹೂರ್ತದ ವೇಳೆ ಮಾತಿಗಿಳಿದ ನಿರ್ದೇಶಕ ಗುರುವೇಂದ್ರ ಅವರು ಇಬ್ಬರು ನಾಯಕಿಯರು ಈ ಚಿತ್ರದಲ್ಲಿ ಇರ್ತಾರೆ.
ಹುಡುಗ ಪೇಟೆಯಿಂದ ಹಳ್ಳಿಗೆ ಸಂಗಿತ ಕಲಿಯೋಕೆ ಬರುತ್ತಾನೆ. ಅಲ್ಲಿ ಒಂದು ಒಂದು ಹುಡುಗಿ ಸಿಗುತ್ತಾಳೆ. ಆದರೆ ಅವನಿಗೆ ಪೇಟೆಯಲ್ಲಿ ಈಗಾಗಲೆ ಗರ್ಲ್ ಫ್ರೆಂಡ್ ಇರ್ತಾಳೆ. ಹೀಗೆ ಕಥೆ ಮುಂದುವರೆಯುತ್ತದೆ. ಒಟ್ಟು ಆರು ಹಾಡುಗಳಿವೆ.
ಶ್ರೀಧರ್ ಕೋಟೇಶ್ ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ವೆಂಕಟೇಶ್. ತೀರ್ಥಹಳ್ಳಿ, ಆಗುಂಬೆ, ಮಡಿಕೇರಿ ಮುಂತಾದೆಡೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
ಈ ಚಿತ್ರದಲ್ಲಿ ನನಗೆ ಚಾಲೆಂಜಿಂಗ್ ಪಾತ್ರ ದೊರೆತಿದೆ ಎಂದು ನಾಯಕ ಆನಂದ್ ಹೇಳಿದರು. ಕ್ಯಾಂಟೀನ್ ಹುಡುಗನಾಗಿ, ಹಳ್ಳಿ ಹುಡುಗನಾಗಿ, ಕೊನೆಯಲ್ಲಿ ಹುಚ್ಚನಾಗಿ ಅಭಿನಯ ಮಾಡಬೇಕಾದ ಈ ಪಾತ್ರದಲ್ಲಿ ತನ್ನ ಅಭಿನಯ ಸಾಮರ್ಥ್ಯಕ್ಕೆ ಒಂದು ಪರೀಕ್ಷೆ ಆಗಲಿದೆ ಎಂದರು.