ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕರಾವಳಿಯಲ್ಲಿ ಕರೆಯೇ ಕೋಗಿಲೆ ಮಾಧವನಾ
ಸುದ್ದಿ/ಗಾಸಿಪ್
Feedback Print Bookmark and Share
 
ಖ್ಯಾತ ಲೇಖಕಿ ದಿ. ಉಷಾ ನವರತ್ನರಾಂ ಅವರ ಹೊಸರಾಗ ಕಾದಂಬರಿ ಈಗ ಚಲನಚಿತ್ರವಾಗುತ್ತಿದೆ. ಹೆಸರು ಕರೆಯೇ ಕೋಗಿಲೆ ಮಾಧವನಾ. ಸ್ನೇಹ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಕುಮಾರಿ ಸ್ನೇಹಾ.

ಸಾಹಿತಿ ಶ್ಯಾಮ್‌ಸುಂದರ್ ಕುಲಕರ್ಣಿ ಅವರು ರಚಿಸಿದ ಗುರುದೇವ ನೀನೇ ಬೆಳಕಾಗಿ ಬಂದೆ... ಗೀತೆಯನ್ನು ಕುಂದಾಪುರದ ಸದಾಶಿವ ಕೂಡಗಿ ಅವರ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ನಿರ್ದೇಶಕ ಕೃಷ್ಣ ನಾಡಿಗ್ ಅವರ ನೇತೃತ್ವದಲ್ಲಿ ದೇವಿ ನೃತ್ಯ ಸಂಯೋಜನೆಯಲ್ಲಿ ದಿಗಂತ್, ಶೀತಲ್, ದತ್ತಣ್ಣ, ಎಂ.ಎನ್. ಲಕ್ಷ್ಮೀದೇವಿ, ವಿಜಯ್, ಸೂರ್ಯ, ಮೊದಲಾದ ಕಲಾವಿದರೊಂದಿಗೆ ಚಿತ್ರಿಕರಿಸಲಾಯಿತು.

ಈ ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ ಬರೆದದ್ದು ಸ್ವತಃ ನಿರ್ದೇಶಕ ನಾಡಿಗ್. ಚಿತ್ರಕ್ಕೆ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಅವರು ಸಂಗೀತ ನೀಡಿದ್ದಾರೆ. ಸುರೇಶ್ ಬಾಬುರವರ ಛಾಯಾಗ್ರಹಣ, ಬಸವರಾಜ್ ಅರಸ್ ಅವರು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ವಿ. ಮನೋಹರ್, ಶ್ಯಾಂಸುಂದರ ಕುಲಕರ್ಣಿ, ಜಯಂತ ಕಾಯ್ಕಿಣಿ, ಎಂ.ಎನ್. ವ್ಯಾಸರಾವ್ ಮೊದಲಾದ ಖ್ಯಾತನಾಮರು ಗೀತೆಗಳನ್ನು ರಚಿಸಿದ್ದಾರೆ.

ತಾರಾ ಬಳಗದಲ್ಲಿ ಖ್ಯಾತ ದಾಸ ಸಾಹಿತ್ಯ ಗಾಯಕರಾದ ವಿದ್ಯಾಭೂಷಣರವರ ಪತ್ನಿ ಶ್ರೀಮತಿ ರಮಾ ವಿದ್ಯಾಭೂಷಣರು ಸೇರ್ಪಡೆಯಾಗಿರುವುದು ಚಿತ್ರದ ಮತ್ತೊಂದು ವಿಶೇಷ.