ರಮೇಶ್ ಯಾವಾಗಲೂ ಒಳ್ಳೆಯದನ್ನೆ ಆಲೋಚಿಸುತ್ತಾರೆ. ಒಳ್ಳೆಯ ಸಂಗತಿಗಳ ಬಗ್ಗೆಯೇ ಮಾತನಾಡುತ್ತಾರೆ. ಇತ್ತೀಚೆಗೆ ತಮ್ಮ ನಿರ್ದೇಶನದ ಆಕ್ಸಿಡೆಂಟ್ ಚಿತ್ರದ ಬಗ್ಗೆ ಮಾತನಾಡುತ್ತಾ, ಬೆಂಗಳೂರು ಅಪಘಾತಗಳಿಗೆ ಹೆಸರುವಾಸಿ. ಯಾವಾಗಲೂ ಎಲ್ಲಿ ನೋಡಿದರೂ ಆಕ್ಸಿಡೆಂಟ್‌ಗಳೇ ಆದರೆ ಹೊಸವರ್ಷವು ಆಕ್ಸಿಡೆಂಟ್‌ಗಳಿಂದ ದೂರವಿರಲಿ. ಆದರೆ ಈ ಆಕ್ಸಿಡೆಂಟ್ ಮಾತ್ರ ಎಲ್ಲರೂ ನೋಡಲೇಬೇಕು ಎಂದರು ರಮೇಶ್ ಅರವಿಂದ್.
ಆಕ್ಸಿಡೆಂಟ್ ಅಂದ ಮಾತ್ರಕ್ಕೆ ರಕ್ತಸಿಕ್ತ ದೇಹ, ಗೋಳಾಟವೆಂಬ ಕೆಟ್ಟ ಯೋಚನೆ ಯಾಕೆ ಮಾಡ್ಬೇಕು. ಅದಕ್ಕೆ ಉತ್ತಮವಾದ ವ್ಯಾಖ್ಯಾನವನ್ನು ನೀಡಬಹುದು. ನಾವು ಆಕಸ್ಮಿಕವಾಗಿ ಯಾರನ್ನಾದರೂ ಭೇಟಿ ಮಾಡುತ್ತೇವೆ. ಅದರಿಂದ ಸಂತೋಷವಾಗುತ್ತದೆ. ಇದು ಇನ್ಸಿಡೆಂಟ್, ಆಕ್ಸಿಡೆಂಟ್ ಅಲ್ಲ. ಎಂದು ಧ್ವಂದ್ವಾರ್ಥ ಬಗ್ಗೆ ಮಾತನಾಡಿದರು ರಮೇಶ್.
ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ದವಾಗಿದ್ದು, ರಮೇಶ್ ನಾಯಕನಾಗಿ ಅಭಿನಯಿಸಿದ್ದಾರೆ. ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.