ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೋಡ್ಲು ಬಸವಣ್ಣ
ಸುದ್ದಿ/ಗಾಸಿಪ್
Feedback Print Bookmark and Share
 
ತಮಾಷೆಗಾಗಿ ಚಿತ್ರದ ನಂತರ ನಾಪತ್ತೆಯಾಗಿದ್ದ ಕೋಡ್ಲು ರಾಮಕೃಷ್ಣ ಮತ್ತೆ ಬಂದಿದ್ದಾರೆ. ಈ ಬಾರಿಯದೂ ಇನ್ನೊಂದು ಹಾಸ್ಯ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅದರ ಹೆಸರು ಬೀದಿ ಬಸವಣ್ಣ.

ಚಿತ್ರಗಳ ಫಲಿತಾಂಶಕ್ಕೂ ಸಿಗುವ ಅವಕಾಶಕ್ಕೂ ಸಂಬಂಧವಿಲ್ಲ ಎನ್ನುವ ಗಾಂಧಿನಗರದ ಜೋಕನ್ನು ನಿಜ ಮಾಡಿದ್ದಾರೆ ಕೋಡ್ಲು. ಕಳೆದ ವರ್ಷ ಮಾಡಿದ ತಮಾಷೆಗಾಗಿ ಚಿತ್ರ ಪ್ರೇಕ್ಷಕರಿಗೆ ಹಿಡಿಸಿರಲಿಲ್ಲ. ಆ ಚಿತ್ರ ವಿಫಲವಾದರೂ ಅವಕಾಶ ಹೇಗೆ ಸಿಕ್ಕಿತು ಎಂಬುದು ಚಿತ್ರರಸಿಕರ ಮಿಲಿಯನ್ ಡಾಲರ್ ಪ್ರಶ್ನೆ.

ನವರಸ ನಾಯಕ ಜಗ್ಗೇಶ್ ನಾಯಕರಾಗಿರುವ ಈ ಚಿತ್ರದಲ್ಲಿ ವಿ. ಹರಿಕೃಷ ಅವರ ಸಂಗೀತ, ಜಿ.ಎಸ್.ವಿ. ಸೀತಾರಾಮ್ರವರ ಛಾಯಾಗ್ರಹಣ ಇರುತ್ತದೆ ಎಂದು ತಿಳಿದುಬಂದಿದೆ. ಈ ಚಿತ್ರ ಸಾಯಿ ರಾಘವೇಂದ್ರ ಆರ್ಟ್ ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿ ಬರಲಿದೆ.

ಹೊಸ ವರ್ಷಕ್ಕೆ ಹೊಸ ಚಿತ್ರದೊಂದಿಗೆ ಪ್ರೇಕ್ಷಕರತ್ತ ಮುಖ ಮಾಡಿದ ಕೋಡ್ಲು, ಚಿತ್ರದ ಟೈಟಲ್ಲಿಗೂ ಕಾರ್ಯವೈಖರಿಗೂ ಸಂಬಂಧವಿದೆಯೇ ಅನ್ನುವುದು ಗಾಂಧಿನಗರದ ಮಾತು.