ಮುಕ್ತಾಯ ಹಂತಕ್ಕೆ ಮೇಘವೇ ಮೇಘವೇ
ವಿ. ನಾಗೇಂದ್ರ ಪ್ರಸಾದ್ ನಿರ್ದೇಶನದ, ಸನ್ರೈಜ್ ಫಿಲಂಸ್ ಲಾಂಛನದಲ್ಲಿ ರಘುಕುಮಾರ್ ನಿರ್ಮಿಸುತ್ತಿರುವ ಮೇಘವೇ ಮೇಘವೇ ಚಿತ್ರದ ಚಿತ್ರಿಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ಈಗಾಗಲೇ ಸಂಕಲನ ಕಾರ್ಯವು ಪೂರ್ಣಗೊಂಡಿದ್ದು, ಸುದೀಪ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಹಲವು ಚಿತ್ರಕ್ಕೆ ಸಂಗೀತ ನೀಡಿರುವ ಹರಿಕೃಷ್ಣ ಈ ಚಿತ್ರಕ್ಕೂ ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ದಾಸರಿ ಸೀನು ಛಾಯಾಗ್ರಹಣ ಈ ಚಿತ್ರದ ಹೈಲೈಟ್. ನಿರ್ದೇಶನ ಮಾತ್ರವಲ್ಲದೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯವನ್ನು ನಾಗೇಂದ್ರ ಪ್ರಸಾದ್ರವರೇ ವಹಿಸಿಕೊಂಡಿದ್ದಾರೆ. ಕತೆಗೆ ಸಂಬಂಧಿಸಿದಂತೆ ಈಗಾಗಲೇ ನೇಪಾಳ, ಕುಲುಮನಾಲಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಹಿಂದಿಯ ಲಗಾನ್ ಚಿತ್ರದ ನಾಯಕಿ ಗ್ರೇಸಿ ಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದು ಅವರು ಮೊದಲ ಕನ್ನಡ ಚಿತ್ರ. ಉಳಿದಂತೆ ರಾಮ್, ಶೋಭರಾಜ್ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ.