ಒ ಮನಸೆ ಚಿತ್ರದ ಹಾಡಿನ ಚಿತ್ರೀಕರಣ
ಶರಣ್ ಚಿತ್ರಕತೆ ರಚಿಸಿ ನಿರ್ದೇಶನದೊಂದಿಗೆ ಸಂಗೀತ ನೀಡುತ್ತಿರುವ ಚಿತ್ರ ಓ ಮನಸೆ ಚಿತ್ರದ ಹಾಡಿನ ಚಿತ್ರೀಕರಣ ಕುಂಬಳಗೋಡುವಿನ ಬಿ.ಜಿ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.
ಈ ಚಿತ್ರವನ್ನು ಶ್ರೀ ಚಂಪಕಧಾಮ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್. ವಿಶ್ವನಾಥ್ ಕುಮಾರ್ ನಿರ್ಮಿಸುತ್ತಿದ್ದಾರೆ. ಲವ್ವು ಲವ್ವು ಅಂತಳಿ ಎಂಬ ಹಾಡಿಗೆ ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನದಲ್ಲಿ, ನಾಯಕ- ನಾಯಕಿಯರೊಂದಿಗೆ ಕೋಮಲ್, ವಿಶ್ವ ಹಾಗೂ 80 ನೃತ್ಯಗಾರರೊಂದಿಗೆ ಚಿತ್ರೀಕರಣ ನಡೆಸಲಾಯಿತು.
ಚಿತ್ರದಲ್ಲಿ ನಾಯಕನಾಗಿ ಧ್ಯಾನ್ ಅಭಿನಯಿಸಿದ್ದಾರೆ. ಅಮೃತಧಾರೆ ಚಿತ್ರದ ಯಶಸ್ಸಿನ ನಂತರ ಬಂದ ಅವರ ಸಜಿನಿ, ಜಾಕ್ಪಾಟ್ ಚಿತ್ರಗಳು ವಿಫಲಗೊಂಡಿದ್ದವು. ಈಗ ಓ ಮನಸೇ ಚಿತ್ರ ಅವರಿಗೆ ಯಶಸ್ಸು ತಂದುಕೊಡಲಿದೆಯೇ ಎಂಬುದನ್ನ ನೋಡಬೇಕು. ಚಿತ್ರದ ನಾಯಕಿಯಾಗಿ ಜೆನ್ನಿಫರ್ ಅಭಿನಯಿಸುತ್ತಿದ್ದಾರೆ.