ಇತ್ತೀಚೆಗೆ ಬಿಡುಗಡೆಯಾದ "ಗುಣವಂತ" ಚಿತ್ರ ಸೋತಿದೆ. ಅದಕ್ಕೆ ಪ್ರೇಮ್ ಅಭಿಮಾನಿಗಳು ನಿರಾಶರಾದರು. ಮಾಧ್ಯಮಗಳಲ್ಲಿ ವಿಮರ್ಶೆಗಳು ಕಟುವಾಗಿದ್ದವು. ಪ್ರೇಮ್ ನಾಯಕನಾಗಿ ನಟಿಸಿರುವ ಸವಿಸವಿ ನೆನಪು ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು. ಹಾಗೇ ಗುಣವಂತ ಸೋತಿದೆ.
MOKSHA
ಗೆಲ್ಲುವ ಕುದುರೆ ಹಿಂದೆ ಬೀಳುವ ಚಿತ್ರೋದ್ಯಮದ ಜನರು ಹೀಗೆ ಸೋಲುಂಡ ಚಿತ್ರದ ನಾಯಕ ನಟನ ಹಿಂದೆ ಬೀಳುವುದಿಲ್ಲ. ಆದರೆ ಪ್ರೇಮ್ ಹೇಳುವುದೇ ಬೇರೇ. ಚಿತ್ರ ಬಿಡುಗಡೆಯಾದ ಮೇಲೆ ಚಿತ್ರ ಚೆನ್ನಾಗಿಲ್ಲ ಎಂದು ಚಿತ್ರತಂಡದಲ್ಲಿ ಒಬ್ಬನಾದ ಹೀರೋ ಹೇಳಬಾರದು. ಹೀಗೇನಾದರೂ ಹೀರೋ ಹೇಳಿದರೆ ಏನಾಗುತ್ತದೆ? ಮತ್ತೊಂದು ವಿವಾದ ಸೃಷ್ಟಿಯಾಗುತ್ತದೆ. ಈ ಸಿನೆಮಾ ಕತೆ ಎಷ್ಟು ಚೆನ್ನಾಗಿದ್ದರೂ ಸೆಲ್ಯೂಲಾಯ್ಡ್ ಮೇಲೆ ರೂಪಿಸುವಾಗ ಸೋತಿದೆ ಎನ್ನುವುದು ಪ್ರೇಮ್ ಅಭಿಮಾನಿಗಳ ಅಭಿಪ್ರಾಯ.
ಇದರಿಂದ ಪ್ರೇಮ್ ಹತಾಶನಾಗಿಲ್ಲ. ಸಿನೆಮಾ ಮಾಡುವಾಗ ನಿರ್ದೇಶಕ ಹೇಳಿದ ಹಾಗೆ ಕೇಳಬೇಕು. ಚಿತ್ರ ನಿರ್ಮಾಣದಲ್ಲಿ ನಟರು ಮೂಗು ತೂರಿಸಿದರೆ ತಲೆ ಹರಟೆ ಎಂಬ ಹೆಸರು ಬರುತ್ತದೆ ಎಂಬ ಮಾತು ಇದ್ದರೂ ಇನ್ನುಮುಂದೆ ತಾವು ನಟಿಸುವ ಚಿತ್ರಗಳಲ್ಲಿ ತಾವೂ ಸಹಾ ಸಲಹೆ ನೀಡುವುದಾಗಿ ಪ್ರೇಮ್ ಹೇಳುತ್ತಿದ್ದಾರೆ.
ಇದನ್ನು ಮೊದಲೇ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಹೇಳಲು ಅವರು ನಿರ್ಧರಿಸಿದ್ದಾರೆ. ಇದು ಚಿತ್ರರಂಗದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳುವ ಯತ್ನ ಎಂದೂ ಹೇಳಿದ್ದಾರೆ. ಈ ಸಿನೆಮಾದಲ್ಲಿ ತಾವು ಪ್ರೇಕ್ಷಕರಿಗೆ ನಿರಾಶೆ ಮೂಡಿಸಿದ್ದಕ್ಕೆ ಕ್ಷಮೆ ಇರಲಿ ಎಂದು ಮನವಿ ಮಾಡಿದ್ದಾರೆ.