ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಫೆಬ್ರವರಿಯಲ್ಲಿ ಸಿಐಡಿ ಈಶ
ಸುದ್ದಿ/ಗಾಸಿಪ್
Feedback Print Bookmark and Share
 
ಮಲೆಯಾಳಂ ಕಾದಂಬರಿ ಆಧಾರಿತ ಕನ್ನಡ ಚಿತ್ರ ಸಿಐಡಿ ಈಶ ಸದ್ಯದಲ್ಲೇ ತೆರೆ ಕಾಣಲಿದೆ. ನವರಸ ನಾಯಕ ಜಗ್ಗೇಶ್ ಸಿಐಡಿ ಈಶ. ಫರ್ನಾಂಡಿಸ್ ನಿರ್ದೇಶನದಲ್ಲಿ ಐವತ್ತು ಮೂರು ದಿನಗಳಲ್ಲಿ ಚಿತ್ರದ ಟಾಕೀ ಭಾಗದ ಚಿತ್ರೀಕರಣ ಮುಗಿದಿದೆ.

ಇದೊಂದು ಫುಲ್ ಕಾಮೆಡಿ ಚಿತ್ರವಾಗಿದ್ದು, ಸಿನೆಮಾ ನೋಡಲು ಕುಳಿತ ಪ್ರೇಕ್ಷಕ ಚಿತ್ರ ಮುಗಿಯುವವರೆಗೆ ನಗದೇ ಇರಲು ಸಾಧ್ಯವಿಲ್ಲ ಎನ್ನುತ್ತಾರೆ ನಿರ್ದೇಶಕ ಫರ್ನಾಂಡಿಸ್. ಈ ಚಿತ್ರಕ್ಕೆ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಫೆಬ್ರವರಿಯಲ್ಲಿ ಸಿಐಡಿ ಈಶ ಪ್ರೇಕ್ಷಕರ ಮನರಂಜಿಸಲು ಬರುತ್ತಿದ್ದಾನೆ.

ಈ ಚಿತ್ರ ಬಿಡುಗಡೆ ಆದ ತಕ್ಷಣ ಮತ್ತೊಂದು ಚಿತ್ರದ ನಿರ್ಮಾಣ ಆರಂಭಿಸಬೇಕೆಂಬುದು ನಿರ್ಮಾಪಕ ಉಮಾಕಾಂತ ರಾಜು ಅವರ ಆಶಯ. ಈ ಚಿತ್ರಕ್ಕೆ ವಿಜಯಭಾರತಿ ಸಂಗೀತ ನಿರ್ದೇಶನವಿದೆ. ಛಾಯಾಗ್ರಹಣ: ರಮೇಶ ಬಾಬು. ವಿ.ಮನೋಹರ್ ಎರಡು ಹಾಡುಗಳನ್ನು ರಚಿಸಿದ್ದಾರೆ. ಸಂಭಾಷಣೆ: ರಾಮನಾರಾಯಣ್.