ಸನ್ರೈಸ್ ಫಿಲಂಸ್ ಲಾಂಛನದಲ್ಲಿ ರಘುಕುಮಾರ್ ನಿರ್ಮಿಸುತ್ತಿರುವ ವಿ. ನಾಗೇಂದ್ರ ಪ್ರಸಾದ್ ನಿರ್ದೇಶನದ ಮೇಘವೇ ಮೇಘವೇ ಚಿತ್ರಕ್ಕೆ ಸದ್ಯದಲ್ಲೇ ಡಬ್ಬಿಂಗ್ ನಡೆಯಲಿದೆ.
ಕತೆಗೆ ಪೂರಕವಾಗಿ ನೇಪಾಳ, ಕುಲು ಮನಾಲಿ ಹಾಗೂ ರೋಥಾಂಗ್‌ನಲ್ಲಿ ಚಿತ್ರೀಕರಣ ನಡೆದಿರುವ ಈ ಚಿತ್ರದ ಸಂಕಲನ ಕಾರ್ಯ ಮುಗಿದಿದೆ.
ಸುದೀಪ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ತಾರಾಗಣದಲ್ಲಿ ರಾಮ್, ಗ್ರೇಸಿ ಸಿಂಗ್, ಶೋಭರಾಜ್ ಮುಂತಾದವರಿದ್ದಾರೆ. ಹರಿಕೃಷ್ಣ ಸಂಗೀತ, ದಾಸರಿ ಸೀನು ಛಾಯಾಗ್ರಹಣ ಈ ಚಿತ್ರಕ್ಕಿದೆ.