ನಿಮಗೆ ಆಶ್ಚರ್ಯವಾಗಬಹುದು. ಬೆಂಗಳೂರು ಸಿಂಗಾಪುರ ಬಿಟ್ಟು ಅಮೆರಿಕವಾಗಿ ಮಾರ್ಪಡುತ್ತಿದೆಯೇ? ಹೌದು. ಮಾತಿನಲ್ಲಿ ಸಿಂಗಾಪುರವಾದರೂ ಪ್ರಸ್ತುತ ಬೆಂಗಳೂರು ಈಗ ಅಮೆರಿಕಾವನ್ನು ಅನುಸರಿಸುತ್ತಿದೆ. ಅಮೆರಿಕಾದಲ್ಲಿನ ಬಂಗಲೆ, ಕಾಲೇಜ್ ವಾತಾವರಣವನ್ನು ಬೆಂಗಳೂರಿನಲ್ಲಿಯೂ ಕಾಣಬಹುದು. ಇದನ್ನು ಕಂಡು ಹಿಡಿದವರು ನಿರ್ದೇಶಕ ಚಂದ್ರು.
ಸರ್ಜಾಪುರ ರಸ್ತೆಯಲ್ಲಿರುವ ಇಂಡಸ್ ಇಂಟರ್ನ್ಯಾಷನಲ್ ಸ್ಕೂಲ್ ಅಮೆರಿಕಾ ಮಾದರಿಯಲ್ಲಿಯೇ ಇವೆ. ಅಲ್ಲದೆ ಅಲ್ಲಿರುವ ಟಾಟಾ ಕನ್ಸಲ್ಟನ್ಸಿ ಬಂಗಲೆಯನ್ನು ನೋಡಿದರೆ ಇದು ಬೆಂಗಳೂರೆ ಎಂದು ಅನುಮಾನ ಹುಟ್ಟಬಹುದು ಅಷ್ಟರ ಮಟ್ಟಿಗೆ ಆ ಪ್ರದೇಶದಲ್ಲಿ ಆತ್ಯಾಧುನಿಕತೆಯನ್ನು ಕಾಣಬಹುದು.
ತಮ್ಮ ಹೊಸ ಚಿತ್ರ ತಾಜ್‌ಮಹಲ್ ಚಿತ್ರೀಕರಣವನ್ನು ವಿದೇಶಿ ವಾತಾವರಣದಲ್ಲಿ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಈ ಜಾಗವನ್ನು ನೋಡಿದ ಮೇಲೆ ಇಲ್ಲೆ ಚಿತ್ರೀಕರಣ ಮಾಡುವುದೆಂದು ತೀರ್ಮಾನಿಸಲಾಯಿತು ಎನ್ನುತ್ತಾರೆ ಚಂದ್ರು.
ನಟ ಸುನೀಲ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಚಿತ್ರಕಥೆಯನ್ನು ಬರೆಯಲಾಗಿತ್ತು. ಆದರೆ ಸುನೀಲ್ ಕೊನೆಗೆ ಅಮೆರಿಕಾಕ್ಕೆ ಹೋಗುತ್ತೇನೆ ಸಾರಿ ಆಗೋಲ್ಲ ಅಂದು ಬಿಟ್ಟರಂತೆ. ಇದರಿಂದ ಬೇಸರಗೊಳ್ಳದ ಚಂದ್ರು ಅಜಯd ಅವರನ್ನು ನಾಯಕನಾಗಿ ಕೂರಿಸಿದರು. ನಾಯಕಿ ಪಾತ್ರಕ್ಕೆ ಪೂಜಾಗಾಂಧಿ ಕೂಡ ಓಕೆ ಅಂದಾಗ ನಿರ್ದೇಶಕರಿಗೆ ಖುಷಿಯೋ ಖುಷಿಯಂತೆ.
ಇನ್ನು ಈ ಚಿತ್ರದಿಂದ ಪ್ರೇಕ್ಷಕರು ಅಜಯ್ ಹಾಗೂ ಚಂದ್ರುಗೆ ಎಷ್ಟರ ಮಟ್ಟಿಗೆ ಖುಷಿ ನೀಡಲಿದ್ದಾರೆ ಎಂಬುದು ಚಿತ್ರ ಬಿಡುಗಡೆಯ ನಂತರವೇ ಕಾಣಲಿದೆ.