ಬೆಂಗಳೂರಿನಲ್ಲಿ ತಾಜ್‌ಮಹಲ್ ಚಿತ್ರೀಕರಣ
ತಾಜ್‌ಮಹಲ್ ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ. ಹೆಸರು ತಾಜ್‌ಮಹಲ್ ಆದರೂ ತಾಜ್ ಮಹಲ್‌ನಲ್ಲಿ ಶೂಟಿಂಗ್ ಮಾಡುವುದಿಲ್ಲ. ಹೆಸರು ಮಾತ್ರ ಬಳಸಿಕೊಂಡಿದ್ದು ಎನ್ನುತ್ತಾರೆ ನಿರ್ದೇಶಕ ಚಂದ್ರು.
ಎಕ್ಸ್ಯೂಸ್ ಮಿ ಚಿತ್ರದಲ್ಲಿ ನಟಿಸಿದ್ದ ಅಜಯ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ಮುಂಗಾರು ಮಳೆ ಬೆಡಗಿ ಪೂಜಾಗಾಂಧಿ ನಟಿಸುತ್ತಿದ್ದಾರೆ. ಸರ್ಜಾಪುರ ರಸ್ತೆಯಲ್ಲಿರುವ ಅಮೆರಿಕಾ ಮಾದರಿಯಲ್ಲಿನ ಬಂಗಲೆಯನ್ನು ದಿನಕ್ಕೆ 65ರಿಂದ 85ಸಾವಿರದವರೆಗೆ ಬಾಡಿಗೆ ಕೊಟ್ಟು ಚಿತ್ರೀಕರಣ ಪ್ರಾರಂಭಿಸಲಾಗಿದೆ ಎಂದು ಚಂದ್ರು ತಿಳಿಸಿದ್ದಾರೆ.
ಚಿತ್ರವನ್ನು ಶಿವಶಂಕರ್ ರೆಡ್ಡಿ ಮತ್ತು ಅಶೋಕ್ ನಿರ್ಮಿಸುತ್ತಿದ್ದಾರೆ. ಅಭಿಮನ್ ಸಂಗೀತ ನೀಡಿರುವ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಜಯ್, ಪೂಜಾ ಗಾಂಧಿ ಅನಂತ್‌ನಾಗ್ ಇದ್ದಾರೆ.