ಕನ್ನಡ ಚಿತ್ರರಂಗದಲ್ಲಿ ಒಂದಲ್ಲ ಒಂದು ವಿವಾದ ಸೃಷ್ಟಿಯಾಗುತ್ತಲೆ ಇರುತ್ತದೆ. ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ವಿವಾದದ ಬೆನ್ನಲ್ಲೆ ಈಗ ಬೀದಿ ಬಸವಣ್ಣ ಚಿತ್ರ ಪ್ರಾರಂಭವಾಗುವ ಮೊದಲೆ ವಿವಾದ ಸೃಷ್ಟಿಸಿದೆ. ಈ ಚಿತ್ರವನ್ನು ಕೋಡ್ಲು ರಾಮಕೃಷ್ಣ ನಿರ್ದೇಶಿಸುತ್ತಿದ್ದಾರೆ.
ವಿಷಯ ಇಷ್ಟೆ. ಬೀದಿ ಬಸವಣ್ಣ ಚಿತ್ರ ಬಸವಣ್ಣರಿಗೆ ಅವಮಾನ ಮಾಡಿದಂತೆ ಎನ್ನುವುದು ಚಿತ್ರನಟ, ನಿರ್ಮಾಪಕ ಅಶೋಕ್ ಅವರ ವಾದ. ಈಗಾಗಲೇ ಪಾಶ್ಚಾತ್ಯ ಸಂಸ್ಕ್ಕತಿ ಭಾರತದಲ್ಲಿ ಅಂಬೆಗಾಲಿಡುತ್ತಿದ್ದ ಸಂದರ್ಭದಲ್ಲಿ ಶರಣ ಸಂವಿಧಾನವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಮಹಾಮಹಿಮರ ಹೆಸರಿನಲ್ಲಿ ಚಿತ್ರ ನಿರ್ಮಿಸುವುದು ಸೂಕ್ತವಲ್ಲ ಎಂದು ಅಶೋಕ್ ತಿಳಿಸಿದರು.
ಕೋಡ್ಲು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಜಗ್ಗೇಶ್ ಅಭಿನಯದಲ್ಲಿ ಹೇಗೆ ಮೂಡಬಹುದು ಎಂಬುದನ್ನು ಕಲ್ಪಿಸಿಕೊಂಡರೆ ನೋವಾಗುತ್ತದೆ. ಕನ್ನಡಿಗರ ಭಾವನೆಗಳನ್ನು ಗೌರವಿಸಲು ಈ ಚಿತ್ರದ ಹೆಸರನ್ನು ಬದಲಿಸಬೇಕು ಎಂಬುದು ಅವರ ಮನವಿ.
ಈ ಚಿತ್ರ ಈಗಾಗಲೇ ಪ್ರಾರಂಭಗೊಂಡಿದ್ದು, ವಿ.ಹರಿಕೃಷ್ಣ ಅವರ ಸಂಗೀತ, ಜಿ.ಎಸ್.ವಿ. ಸೀತಾರಾಮ್ರವರ ಛಾಯಾಗ್ರಹಣವಿದೆ.