ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ದೇಶಕರ ಆತ್ಮ ಸಂತೋಷಕ್ಕೆ ಚಿತ್ರ ನಿರ್ಮಾಣ
ಸುದ್ದಿ/ಗಾಸಿಪ್
Feedback Print Bookmark and Share
 
ಒಂದು ಚಿತ್ರದ ನಿರ್ದೇಶಕರು ತಮ್ಮ ಆತ್ಮ ಸಂತೋಷಕ್ಕೆ ಸಿನೆಮಾ ತಯಾರಿಸುತ್ತಾರೆಯೇ? ಇಂಥದೊಂದು ಪ್ರಶ್ನೆ ಎದುರಾಗಿದ್ದು, ಪಟ್ರೆ ಲವ್ಸ್ ಪದ್ಮ ಚಿತ್ರ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ. ಈ ಚಿತ್ರದ ನಿರ್ದೇಶಕರು ಚಂದ್ರಶೇಖರ್ ಶ್ರೀ ವಾಸ್ತವ್. ಅವರು ತಾವು ಹೆಣೆದ ಕತೆಯನ್ನಿಟ್ಟುಕೊಂಡು ಒಂದುವರೆ ವರ್ಷಗಳ ಕಾಲ ಸೇಲ್ಸ್ ಮ್ಯಾನ್ ರೀತಿ ಓಡಾಡಿದರಂತೆ.
ಯಾವ ನಿರ್ಮಾಪಕರೂ ಸಿಗದೆ ನಿರಾಸೆಗೊಳಗಾದಾಗ ಇವರ ಕತೆ ಸಿನೆಮಾ ಮಾಡಲು ಒಬ್ಬರು ನಿರ್ಮಾಪಕರು ದೊರೆತರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋಲಬಹುದು ಅಥವಾ ಗೆಲ್ಲಬಹುದು. ದೊಡ್ಡ ಹೆಸರು ಮಾಡಬಹುದು. ಆದರೆ ಅದರ ಬಗ್ಗೆ ತಮಗೆ ಯೋಚನೆ ಇಲ್ಲ. ತಮ್ಮ ಕನಸಿಗೊಂದು ರೂಪ ಕೊಡಬೇಕಿತ್ತು ಎಂದು ಹೇಳಿದ ನಿರ್ದೇಶಕರು ತಮ್ಮ ತಪ್ಪಿನ ಅರಿವಾಗಿ ತೇಪೆ ಹಾಕುವ ಕೆಲಸವನ್ನು ಮಾಡಿದರು.

ಯಾವುದೇ ಕಾರಣಕ್ಕೂ ಚಿತ್ರದಲ್ಲಿ ತಲೆ ಹಾಕುವಂತಿಲ್ಲ ಎಂಬ ಷರತ್ತಿನ ಮೇಲೆ ಈ ಚಿತ್ರದ ನಿರ್ದೇಶನಕ್ಕೆ ಸಮ್ಮತಿಸಿದ್ದರಂತೆ. ಇಷ್ಟೆಲ್ಲಾ ಷರತ್ತುಗಳನ್ನು ಒಪ್ಪಿದ ನಿರ್ಮಾಪಕರನ್ನು ತೋರಿಸಲು ಯಾಕೋ ಅವರು ಮನಸು ಮಾಡಿರಲಿಲ್ಲ. ಅದಕ್ಕೂ ಕಾರಣ ಹೇಳಿದರು.

ಪ್ರೇಕ್ಷಕ ಚಿತ್ರ ನೋಡಲು ಬರುತ್ತಾನೆಯೇ ಹೊರತು ಚಿತ್ರ ನಿರ್ಮಾಪಕರು ಯಾರು? ಅವರು ಹೇಗಿರುತ್ತಾರೆ ಎಂದು ನೋಡಲು ಬರುವುದಿಲ್ಲ ಎಂಬುದು ಅವರ ಸಮಜಾಯಿಷಿ. ಆದರೆ ನಿರ್ಮಾಪಕರನ್ನು ಪತ್ರಿಕಾಗೋಷ್ಠಿಗೆ ಕರೆದು ಕೂರಿಸಬೇಕಾಗಿತ್ತು ಎಂದೆನಿಸಿತ್ತು.

ಪಟ್ರೆ ಲವ್ಸ್ ಪದ್ಮ ಚಿತ್ರದ ನಾಯಕನಿಗೆ ವಿಚಿತ್ರ ಖಯಾಲಿ. ತಾನು ಮದುವೆಯಾಗಬೇಕಾಗಿರುವ ಹುಡುಗಿಯ ಹೆಸರು ಪದ್ಮ ಆಗಿರಬೇಕು ಎಂಬುದು. ಈ ಚಿತ್ರದ ನಾಯಕ ಅಜಿತ್. ಐವರು ಪದ್ಮ ಎಂಬ ಹೆಸರಿನ ಪಾತ್ರಗಳಿವೆ. ಅವುಗಳನ್ನು ಅಭಿನಯಿಸಿದವರು ಕೃತ್ತಿಕಾ, ದೀಪಿಕಾ, ವಿಜಯಲಕ್ಷ್ಮಿ, ಪವಿತ್ರ, ಹಂಸ. ಒಂದೂವರೆ ತಿಂಗಳ ಹಿಂದೆ ಆರಂಭವಾದ ಈ ಚಿತ್ರದ ಷೂಟಿಂಗ್ ಮುಗಿದು ಲ್ಯಾಬಿನಲ್ಲಿ ಸಿದ್ಧವಾಗುತ್ತಿದೆ.