ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 25 ಲಕ್ಷದ ಸಂಭಾವನೆ ಬೇಡಿಕೆಯಿಟ್ಟ ರಮ್ಯ
ಸುದ್ದಿ/ಗಾಸಿಪ್
Feedback Print Bookmark and Share
 
PTI
ಚಿತ್ರಗಳಲ್ಲಿ ನಾಯಕ ನಟರಿಗೆ ಮಾತ್ರ ಸಂಭಾವನೆ ಹೆಚ್ಚು. ನಾಯಕಿಯರಿಗೆ ನಾಯಕನಟರಿಗೆ ನೀಡುವ ಸಂಭಾವನೆಗೆ ಸಮನಾಗಿ ಏಕೆ ನೀಡುವುದಿಲ್ಲ ಎಂದು ಇತ್ತೀಚಿಗೆ ಚಿತ್ರೋದ್ಯಮದಲ್ಲಿ ಒಂದು ಪ್ರಶ್ನೆ ಎದ್ದಿತ್ತು. ಪ್ರೇಕ್ಷಕರ ಮನರಂಜನೆಗಾಗಿ ಸುಂದರವಾದ ಹೆಣ್ಣೊಂದು ಚಿತ್ರದಲ್ಲಿ ಇರಬೇಕು ಎಂಬ ನಿರ್ಮಾಪಕರ ಹಾಗೂ ನಿರ್ದೇಶಕರ ಆಶಯದಂತೆ ನಾಯಕಿ ಚಿತ್ರದಲ್ಲಿರಬೇಕು. ಆಕೆಗೆ ಸಂಭಾವನೆ ಏಕೆ ಹೆಚ್ಚಿಗೆ ಕೊಡಬೇಕು ಎನ್ನುವುದು ನಿಮಾರ್ಪಕರ ವಾದ.

ಆದರೂ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ನಟಿಯರೂ ಸಹಾ ಹೆಚ್ಚು ಸಂಭಾವನೆ ಕೊಡುವಂತೆ ಬೇಡಿಕೆ ಇಡುತ್ತಾರೆ. ಮಾಲಾಶ್ರೀ ಒಂದಾನೊಂದು ಕಾಲದಲ್ಲಿ ತುಂಬಾ ಬೇಡಿಕೆಯ ನಟಿ. ಆಕೆ ಆ ಕಾಲದಲ್ಲೇ ದಿನವೊಂದಕ್ಕೆ ಒಂದು ಲಕ್ಷ ರೂ. ಪಡೆಯುತ್ತಿದ್ದರು ಎಂಬ ವಿಷಯ ದಾಖಲಾಗಿತ್ತು. ಈಗ ಆ ದಾಖಲೆ ಮುರಿಯುವ ಸಮಯ ಬಂದಿದೆ. ಹೊಸ ಚಿತ್ರವೊಂದಕ್ಕೆ ರಮ್ಯ 25 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿರುವುದಾಗಿ ಗಾಂಧಿನಗರದಲ್ಲಿ ಸುದ್ದಿ ಚಾಲ್ತಿಯಲ್ಲಿದೆ.

ಪರಭಾಷಾ ನಟಿಯೊಬ್ಬಳು ಚಿತ್ರೀಕರಣದ ಹಂತದಲ್ಲಿರುವ ಒಂದು ಚಿತ್ರದಲ್ಲಿ ನಟಿಸಲು 36 ಲಕ್ಷ ರೂ. ಪಡೆದಿದ್ದಾಳೆ ಎಂಬ ಸುದ್ದಿ ರಮ್ಯ ಕಿವಿಗೆ ಬಿತ್ತಂತೆ. ಕನ್ನಡೇತರ ನಟಿಗೆ ಅಷ್ಟು ಸಂಭಾವನೆ ಕೊಡಬೇಕಾದರೆ ಕನ್ನಡದ ಹುಡುಗಿಯಾದ ತನಗೇಕೆ ಕೊಡುವುದಿಲ್ಲ ನಿರ್ಮಾಪಕರು ಎಂದು ಕೋಪಿಸಿಕೊಂಡು ರಮ್ಯ ತನಗೆ 25 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬುದು ಸುದ್ದಿ. ನಿರ್ಮಾಪಕರು ಈ ಬೇಡಿಕೆಗೆ ಸ್ಪಂದಿಸುತ್ತಾರೋ ಇಲ್ಲವೋ ಗೊತ್ತಿಲ್ಲ.