ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಂದನ ವಾಹಿನಿಯಲ್ಲಿ ಯಕ್ಷಗಾನದ ಕಂಪು
ಸುದ್ದಿ/ಗಾಸಿಪ್
Feedback Print Bookmark and Share
 
ಮಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮುಂತಾದ ಕಡಲ ತೀರದ ಪ್ರದೇಶಗಳ ಜನರಿಗೆ ಯಕ್ಷಗಾನ ಎಂದರೆ ಪಂಚಪ್ರಾಣ.

ಅಂಥ ಆಸಕ್ತರಿಗಾಗಿಯೇ ಚಂದನ ವಾಹಿನಿ ಪ್ರತಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಹಾಗೂ ಭಾನುವಾರ ರಾತ್ರಿ 8-30ಕ್ಕೆ ಯಕ್ಷಕಥನ ಎಂಬ ಮಾಲಿಕೆಯನ್ನು ಪ್ರಸಾರಗೊಳಿಸುತ್ತಿದೆ.

ಪಡುವಲಪಾಯ, ಮೂಡಲಪಾಯ, ಘಟ್ಟದ ಕೋರೆ ಯಕ್ಷಗಾನ ಪ್ರಕಾರಗಳ ಪ್ರಸಿದ್ಧ ಕಲಾವಿದರೊಂದಿಗೆ, ಚಿಂತಕರೊಂದಿಗೆ ಚರ್ಚೆ ಹಾಗೂ ಯಕ್ಷಗಾನ ನಡೆದುಬಂದ ದಾರಿಯ ಹೆಜ್ಜೆ ಗುರುತುಗಳ ಪರಿಚಯವೇ ಈ ಮಾಲಿಕೆ.

ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಕೆರೆಮನೆ ಮಹಾಬಲ ಹೆಗಡೆ, ಶ್ರೀ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ, ಅಮೃತ ಸೋಮೇಶ್ವರ, ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶರಾವ್, ಎಂ.ಓ. ಧೂಪದ, ಜಯಚಂದ್ರರಾಜ ಅರಸ್, ಕೆ.ಗೋವಿಂದ ಭಟ್ಟ, ಕೋಳ್ಯೂರು ರಾಮಚಂದ್ರರಾವ್, ಗಜಾನನ ಭಂಡಾರಿ, ಕಡತೋಕ ಮಂಜುನಾಥ ಭಾಗವತ, ಚಿಂತಕರಾದ ಬನ್ನಂಜೆ ಗೋವಿಂದಾಚಾರ್ಯ ಮುಂತಾದವರ ಸಂದರ್ಶನ ಈಗಾಗಲೇ ಪ್ರಸಾರಗೊಂಡಿದೆ.

ಬೆಳಗುಳಿ ಕಾರ್ಯಕ್ರಮವನ್ನು ರೂಪಿಸಿದ, ಎಲ್.ಜಿ. ಶಿವಕುಮಾರ್ ಅವರು ಯಕ್ಷಕಥನವನ್ನು ಸಂಯೋಜಿಸಿದ್ದಾರೆ. ಲೇಖಕ ಮಹಾಬಲಮೂರ್ತಿ ಕೊಡ್ಲೆಕೆರೆ ಯಕ್ಷಗಾನ ಕಲಾವಿದರೊಂದಿಗೆ ಚರ್ಚೆ ಹಾಗೂ ಯಕ್ಷಗಾನ ಕುರಿತಾದ ಹೆಜ್ಜೆ ಗುರುತುಗಳ ಮಂಥನವನ್ನು ನಡೆಸಿಕೊಡುತ್ತಿದ್ದಾರೆ.

ನಿಲಯದ ಹಿರಿಯ ನಿರ್ದೇಶಕ ಮಹೇಶ್ ಜೋಶಿ ಅವರ ಆಸಕ್ತಿಯಿಂದಾಗಿ ಇಂಥಾ ಕಾರ್ಯಕ್ರಮ ರೂಪುಗೊಂಡಿದೆ ಎನ್ನುತ್ತಾರೆ ಮಹಾಬಲ ಮೂರ್ತಿ.