ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಿಂಚಿದ ವೈಭವಿ
ಸುದ್ದಿ/ಗಾಸಿಪ್
Feedback Print Bookmark and Share
 
ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗಬೇಕು, ಸಿನಿಮಾ ಕಲಾವಿದರ ಮಕ್ಕಳು ಅಭಿನಯಕ್ಕೆ ಇಳಿಯಬೇಕು ಎಂದೇನೂ ನಿಯಮವಿಲ್ಲದಿದ್ದರೂ ಪೋಷಕರು ಇರುವ ಕ್ಷೇತ್ರಗಳಲ್ಲಿ ಅವರಿಗೆ ಅವಕಾಶ ದೊರೆಯುವುದರಿಂದ ಅವರೂ ಆ ಕ್ಷೇತ್ರಗಳಿಗೆ ಪ್ರವೇಶಿಸುತ್ತಾರೆ.

ಕಾಲೇಜು ಮೆಟ್ಟಿಲು ಕೂಡಾ ಹತ್ತದ ವೈಭವಿ ಈ ಬಂಧನ ಚಿತ್ರದಲ್ಲಿ ವಿಷ್ಟು ಅವರ ಮೊಮ್ಮಗಳಾಗಿ ನಟಿಸಿದ್ದಾಳೆ. ಆಕೆ ಯಾರು ಗೊತ್ತಾ? ಆ ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ವೈಭವಿ ಮಮ್ಮಿ. ಜೈಜಗದೀಶ್ ಅವಳ ಡ್ಯಾಡಿ.

ಚಿಕ್ಕ ವಯಸ್ಸಿನಲ್ಲೇ ತನ್ನ ಪ್ರತಿಭೆ ಪ್ರದರ್ಶನ ಮಾಡಿದ ವೈಭವಿಯನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ ಅವರ ತಂದೆ ಜೈಜಗದೀಶ್. ಈಗಿನ ಕಾಲದ ಮಕ್ಕಳು ಅದೇನು ಬೋಲ್ಡ್ ರೀ. ಕ್ಯಾಮೆರಾ ಮುಂದೆ ಮೊದಲಬಾರಿ ನಿಂತ್ರೂ ಭಯವಿಲ್ಲ ಕೂಲಾಗಿ ನಟಿಸಿಬಿಡ್ತಾರೆ. ನನ್ನ ಮಗಳು ವೈಭವಿ ಹೇಗೆ ನಟಿಸುತ್ತಾಳೋ ಎನ್ನುವ ಟೆನ್ಷನ್ ನನಗಿದ್ದರೆ ಅವಳು ಮಾತ್ರ ಡ್ಯಾಡಿ ಬಂದು ನೋಡು ಅಂತಾಳೆ.

ಮಾನಿಟರ್ನಲ್ಲಿ ಹಾಕಿ ತೋರಿಸುತ್ತಾಳೆ. ನಿಜಕ್ಕೂ ಪ್ರತಿಭೆ ಇದೆ ಅನ್ಸುತ್ತೆ ಎನ್ನುತ್ತಾರೆ. ಒಳ್ಳೆ ನಟಿಯಾಗಬಲ್ಲ ಎಲ್ಲ ಲಕ್ಷಣಗಳೂ ಅವಳಲ್ಲಿವೆ ಎಂದು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿರುವುದರಿಂದ ವೈಭವಿ ಒಳ್ಳೆ ನಟಿಯಾಗಲಿ ಎಂದು ಹಾರೈಸೋ