ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗಣೇಶ್ ಕಾಸರಗೋಡು ಚಿತ್ರರಂಗ ಪ್ರವೇಶ
ಸುದ್ದಿ/ಗಾಸಿಪ್
Feedback Print Bookmark and Share
 
ಬಣ್ಣ ಮಾಸಿದ ಬದುಕು ಎಂಬ ಕಾರ್ಯಕ್ರಮದ ಮೂಲಕ ಜನರ ಮೆಚ್ಚುಗೆ ಗಳಿಸಿದ ಕನ್ನಡ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಮತ್ತೊಂದು ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದಾರೆ.

ಗಂಗಾ ಕಾವೇರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇವರು ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನೋದಿ ಕಷ್ಟದಲ್ಲಿರುವ ಕಲಾವಿದರಿಗೆ ಎಷ್ಟೋ ಉದಾರಿಗಳು ಸಹಾಯಹಸ್ತ ಚಾಚಿದ್ದಾರೆ.

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀಸುಶಮೀಂದ್ರ ತೀರ್ಥರು ಹಾಗೂ ಸುಯತೀಂದ್ರ ತೀರ್ಥರು ಕೊಡ ಮಾಡುವ ವಿಜಯವಿಠಲ ಪ್ರಶಸ್ತಿ ಈ ಬಾರಿ ಗಣೇಶ್ ಅವರಿಗೆ ಸಂದಿದೆ.

ಚಲನಚಿತ್ರ ಪತ್ರಿಕೋದ್ಯಮಕ್ಕೆ ಮಠವೊಂದು ಪ್ರಶಸ್ತಿ ನೀಡುತ್ತಿರುವುದು ಇದೇ ಮೊದಲಬಾರಿ. ಇತ್ತೀಚಿಗೆ ಹಂಪಿಯ ಶ್ರೀವಿಜಯ ವಿಠಲ ದೇವಸ್ಥಾನದಲ್ಲಿ ಶ್ರೀರಾಘವನಂದನ ಸ್ವಾಮಿಗಳ ಮೂಲ ಸಂಸ್ಥಾನದಲ್ಲಿ ನಡೆದ ಈ ಪ್ರಶಸ್ತಿಯನ್ನು ಸುಶಮೀಂದ್ರ ಸ್ವಾಮಿಗಳು ಗಣೇಶ್ ಅವರಿಗೆ ಪ್ರದಾನ ಮಾಡಿದರು. ಪ್ರಶಸ್ತಿ ಹತ್ತು ಸಾವಿರ ರೂ. ನಗದು, ಫಲಕ, ಶಾಲು ಹಾಗೂ ಮುತ್ತಿನಹಾರ ಒಳಗೊಂಡಿದೆ.