ಪರಿಶುದ್ದ ಪ್ರೀತಿಯ ಯುಗ ಯುಗಗಳೇ ಸಾಗಲಿ
ಪರಿಶುದ್ದ ಪ್ರೀತಿ ಪ್ರೇಮದ ಕತೆಯನ್ನು ಮಾಡಬೇಕೆಂದು ನಿರ್ದೇಶಕ ಶಶಾಂಕ್ ರಾಜ್ ಕನಸಾಗಿತ್ತು. ಈಗ ಅದನ್ನು ಯುಗ ಯುಗಗಳೇ ಸಾಗಲಿ ಚಿತ್ರದ ಮೂಲಕ ತಿಳಿಸಲು ಹೊರಟಿದ್ದಾರೆ. ಮೊದಲ ಬಾರಿಗೆ ನಿರ್ದೇಶಕನಕ್ಕೆ ಇಳಿದಿರುವ ಶಶಾಂಕ್‌ಗೆ ನಿರ್ಮಾಪಕನಾಗಿ ಸಾಥ್ ನೀಡುತ್ತಿರುವವರು ವಸಂತ್‌ಕುಮಾರ್.
ರವಿಚಂದ್ರನ್ ಮಾರ್ಗದರ್ಶನದಲ್ಲಿ ಬೆಳೆದಿರುವವರು ಶಶಾಂಕ್. ಈ ಚಿತ್ರದಲ್ಲಿ ಪೂರ್ತಿಯಾಗಿ ರವಿಚಂದ್ರನ್ ಸ್ಟೈಲ್ ಅನ್ನು ಕಾಣುತ್ತಿರಿ ಎನ್ನುವುದು ಶಶಾಂಕ್ ಉವಾಚ.
ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಇವನ್ನು ಬರೆದುಕೊಟ್ಟವರು ಹಂಸಲೇಖಾ. ನಾಯಕ ಘೋಷ್‌ಗೆ ನಾಯಕನಾಗಿ ಇದು ಮೊದಲ ಚಿತ್ರ್ರ. ಆದರೂ ಅಭಿನಯದಲ್ಲಿ ಸೂಪರ್ ಎಂದು ಬೆನ್ನು ತಟ್ಟುತ್ತಾರೆ ನಿರ್ದೇಶಕ. ಒಟ್ಟಿನಲ್ಲಿ ಎಲ್ಲವೂ ಹೊಸದು. ಚಿತ್ರ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಜನವರಿ ಕೊನೆ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ನಿರ್ಮಾಪಕನಾಗಿ ಮಾತ್ರವಲ್ಲದೆ ಚಿತ್ರಕ್ಕೆ ನಟನಾಗಿಯೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ ವಸಂತ್. ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿದ್ದಾರೆ ಎಂದು ಯಾರೂ ಊಹಿಸದಷ್ಟು ಅಮೋಘವಾಗಿ ಖಳನಾಯಕ ಪಾತ್ರವನ್ನು ಮಾಡಿದ್ದಾರೆ ಎಂದು ಇಡೀ ಟೀಮ್ ಹೊಗಳುತ್ತಿದೆಯಂತೆ. ತಾರಾಗಣದಲ್ಲಿ ಮೇಘಾ ಘೋಷ್, ಅನಂತನಾಗ್, ರಂಗಾಯಣ ರಘು, ಶರತ್ ಲೋಹಿತಾಶ್ವ, ಬಿ.ವಿ. ರಾಧಾ, ನೀನಾಸಂ ಅಶ್ವತ್ ಮೊದಲಾದವರಿದ್ದಾರೆ.