ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೊಗ್ಗಿನ ಮನಸ್ಸು ಅರಳಿ ನಿಂತಿದೆ
ಸುದ್ದಿ/ಗಾಸಿಪ್
Feedback Print Bookmark and Share
 
ಮನರಂಜನೆಯ ಮೂಲ ಉದ್ದೇಶವಾಗಿಟ್ಟುಕೊಂಡು ಮುಂಗಾರು ಮಳೆ ಚಿತ್ರದ ಯಶಸ್ಸಿನ ನಂತರ ಮತ್ತೊಂದು ಚಿತ್ರಕ್ಕೆ ಕೈಹಾಕಿದವರು ಕೃಷ್ಣಪ್ಪ. ಇವರು ನಿರ್ಮಿಸಿದ ಮೊಗ್ಗಿನ ಮನಸ್ಸು ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು ತೆರೆಗೆ ಸಿದ್ಧವಾಗಿದೆ.

ಮೀನಿನ ಚಲನೆಯನ್ನಾದರೂ ಗುರುತಿಸಬಹುದು ಆದರೆ ಹೆಣ್ಣಿನ ಮನಸ್ಸನ್ನು ಅರಿಯುವುದು ಕಷ್ಟ ಎನ್ನುವಂತೆ ಮನಸ್ಸಿನ ಸುತ್ತ ಕಥೆ ನಿರ್ಮಾಣವಾಗಿದೆ. ಇಬ್ಬರೂ ನಾಯಕಿಯರನ್ನು ಕೂಡಿಕೊಂಡು ನಿರ್ಮಾಣವಾದ ಈ ಚಿತ್ರ ಮುಖ್ಯವಾಗಿ ಹದಿಹರೆಯದವರ ಮನಸ್ಸಿನ ಸ್ಥಿತಿಯನ್ನು ಹೇಳ ಹೊರಟಿದೆ.

ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುವಂಥ ಹಾಡುಗಳು ಈ ಚಿತ್ರದಲ್ಲಿವೆ. ಹಿನ್ನೆಲೆ ಸಂಗೀತವನ್ನು ಬಾಣಸವಾಡಿಯ ಸ್ಟೀಫನ್ ಸ್ಟುಡಿಯೋದಲ್ಲಿ ಮಾಡಲಾಗಿದ್ದು, ಎಲ್ಲಾ ಹಾಡುಗಳೂ ಅದ್ಬುತವಾಗಿ ಮೂಡಿಬಂದಿವೆ. ಖ್ಯಾತ ನಿರ್ದೇಶಕ ಮನೋಮೂರ್ತಿರವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ..

ತಾರಾಬಳಗದಲ್ಲಿ ಶುಭಾ ಪೂಂಜಾ, ರಾಧಿಕಾ ಪಂಡಿತ್, ಸಂಗೀತಾ ಶೆಟ್ಟಿ, ಮಾನಸಿ ಮೊದಲಾದವರಿದ್ದಾರೆ.