ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಂದನಾದ ಲೂಸ್‌ ಮಾದ
ಸುದ್ದಿ/ಗಾಸಿಪ್
Feedback Print Bookmark and Share
 
ದುನಿಯಾ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಸಿದ್ದರಾಜುವಿಗೆ ತನ್ನ ಮಗ ಯೋಗಿಶ್ ನಾಯಕನಾಗುತ್ತಾನೆ ಎಂಬ ಕನಸು ಹೊತ್ತವರೇ ಅಲ್ಲ. ಅಲ್ಲದೆ ಯೋಗಿಶ್ ಕೂಡ ಮೊದಲು ಓದು ಮುಗಿಯಲಿ ನಂತರ ನಟನೆ ಮಾಡೋಣ ಎನ್ನುತ್ತಿದವನು.

ಹೀಗೆ ನಟನೆಯ ಬಗ್ಗೆ ಆಸಕ್ತಿ ವಹಿಸದ ಯೋಗಿಶ್‌ನನ್ನು ಮೊದಲು ಚಿತ್ರೀಕರಣಕ್ಕೆ ಎಳೆತಂದವರು ದುನಿಯಾ ಖ್ಯಾತಿಯ ಸೂರಿ. ದುನಿಯಾ ಚಿತ್ರದಲ್ಲಿ ಅವನಿಂದ ಲೂಸ್ ಮಾದ ಪಾತ್ರ ಮಾಡಿಸಿದ್ದು, ಅದು ಯಶಸ್ಸಿನ ಮೆಟ್ಟಿಲೇರಿದ್ದು ಇವೆಲ್ಲಾ ಈಗ ಇತಿಹಾಸ.

ಇಷ್ಟಕ್ಕೆ ಸಾಕು ಎಂದುಕೊಳ್ಳುತ್ತಿರುವಾಗಲೇ ಬಂದಿದ್ದು ನಂದ ಲವ್ಸ್ ನಂದಿತಾ ಚಿತ್ರ. ನಿರ್ದೇಶಕ ವಿಜಯ್‌ಕುಮಾರ್ ಮತ್ತು ಚಿತ್ರಕಥೆಗಾರ ಅಜಯ್‌ಕುಮಾರ್ ಚಿತ್ರದ ಒಂದೊಂದೆ ಅಂಶವನ್ನು ಬಿಡಿಸಿ ಹೇಳಿದಾಗ ಪಾತ್ರವನ್ನು ಬಿಡುವುದಕ್ಕೆ ಮನಸ್ಸಾಗದೆ ಅಭಿನಯಕ್ಕೆ ಒಪ್ಪಿಕೊಂಡರು ಯೋಗಿಶ್.

ಒಟ್ಟಾರೆಯಾಗಿ ನಂದ ಲವ್ಸ್ ನಂದಿತಾ ಚಿತ್ರದ ಬಗ್ಗೆ ಬಹು ನೀರೀಕ್ಷೆಯನ್ನು ಇಟ್ಟುಕೊಂಡವರು ನಿರ್ದೇಶಕ ಗೆಜ್ಜೆನಾದ ವಿಜಯ್ಕುಮಾರ್. ಯಾಕೆಂದರೆ ನಾಯಕಿ ಪಾತ್ರಕ್ಕೆ 200 ಹುಡುಗಿಯರನ್ನು ಹುಡುಕಿದ್ದಾರೆ. ಕೊನೆಗೆ ನಾಯಕಿ ಸ್ಥಾನಕ್ಕಾಗಿ ಶ್ವೇತಾರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈಕೆ ವಾಹಿನಿಯೊಂದರಲ್ಲಿ ನಿರೂಪಕಿಯಾಗಿದ್ದರು.

ಚಿತ್ರ ನಿರ್ಮಾಣವಾದರೆ ಎಲ್ಲವೂ ವ್ಯವಸ್ಥಿತವಾಗಿ ಆಗಬೇಕೆನ್ನುವುದು ನಿರ್ದೇಶಕರ ಅಭಿಪ್ರಾಯವಿರಬೇಕು. ಅದಕ್ಕಾಗಿ ಸಂಗೀತ ಸಂಯೋಜನೆಗಾಗಿ ಕೇರಳ ಮೂಲದ ಎಮಿಲ್‌ರನ್ನು ಕರೆ ತಂದಿದ್ದಾರೆ. ಇವರು ಈ ಮುಂಚೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮಾರ್ಗದರ್ಶನದಲ್ಲಿ ಆರು ತಿಂಗಳು ಕೆಲಸ ಮಾಡಿದ್ದಾರೆ. ನಂದ ಲವ್ಸ್ ನಂದಿತಾ ಚಿತ್ರದ ಹಾಡುಗಳು ಯುವ ಜನತೆಗೆ ಇಷ್ಟವಾಗುವಂಥದ್ದು ಎಂಬುದು ಅವರು ಅಭಿಪ್ರಾಯ.