ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೇಘವೇ ಮೇಘವೇ ಶೀಘ್ರದಲ್ಲಿ ತೆರೆಗೆ
ಸುದ್ದಿ/ಗಾಸಿಪ್
Feedback Print Bookmark and Share
 
ಮೇಘವೇ ಮೇಘವೇ ಕೌಟುಂಬಿಕ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಸಂಕಲನ ನಡೆಯುತ್ತಿದೆ. ಬಾಲಿವುಡ್ ಬೆಡಗಿ ಹಾಗೂ ಲಗಾನ್ ಖ್ಯಾತಿಯ ಗ್ರೇಸಿಸಿಂಗ್ ಮೊತ್ತ ಮೊದಲ ಬಾರಿಗೆ ಕನ್ನಡಕ್ಕೆ ಪರಿಚಯಿಸಿದವರು ನಿರ್ದೇಶಕ ನಾಗೇಂದ್ರ ಪ್ರಸಾದ್.

ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಪ್ರೀತಿ ಕಥೆಯ ಮೂಲವಸ್ತು. ಕರ್ನಾಟಕ ಮೂಲದ ಮಧ್ಯಮ ವರ್ಗದ ಕುಟುಂಬ ನೇಪಾಳದಲ್ಲಿ ನೆಲೆಸಿರುತ್ತದೆ. ಕುಟುಂಬದ ಯಜಮಾನ ನೃತ್ಯದ ಬಗೆಗಿನ ಒಲವಿನಿಂದ ಬೆಂಗಳೂರಿನಿಂದ ನೃತ್ಯಗಾರರನ್ನು ಕರೆಸುತ್ತಾನೆ. ಆ ಗುಂಪಿನಲ್ಲಿ ನಾಯಕನೂ ಇರುತ್ತಾನೆ. ಅಲ್ಲಿಂದ ಲವ್ ಸ್ಟೋರಿ ಶುರುವಾಗುತ್ತದೆ.

ಕಥೆಯ ಸ್ವಲ್ಪ ತುಣುಕನ್ನು ಮಂಡಿಸಿದ ನಿರ್ದೇಶಕರ ಮಾತಿನಲ್ಲೆಲ್ಲಾ ನೇಪಾಳವೇ ತುಂಬಿತ್ತು. ನಾಯಕ ರಾಮ್ ಇದರಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಹಿಂದಿನ ಚಿತ್ರಗಳ ನಟನೆಗೂ ಇದಕ್ಕೂ ಬಹಳ ವ್ಯತ್ಯಾಸವಿದೆ ಎಂದು ರಾಮ್ ನಟನೆಗೆ ಶಹಭಾಸ್‌ಗಿರಿ ಕೊಟ್ಟರು ನಿರ್ದೇಶಕರು.

ಇನ್ನು ನಾಯಕಿ ಬಗ್ಗೆ ಎರಡೂ ಮಾತಿಲ್ಲ. ಬಾಲಿವುಡ್ ನಟಿಯಾದರೂ, ಒಂಚೂರು ಹಮ್ಮು ಬಿಮ್ಮು ತೋರಿಸದೆ ಎಲ್ಲರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು ನಾಗೇಂದ್ರ ಪ್ರಸಾದ್. ರಘುಕುಮಾರ್ ಚಿತ್ರವನ್ನು ನಿರ್ಮಿಸಿದ್ದಾರೆ ಹಾಗೂ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ಮುಖ್ಯ ಪಾತ್ರದಲ್ಲಿ ಕರಿಬಸವಯ್ಯ, ಮಂಡ್ಯ ರಮೇಶ್, ಶೋಭರಾಜ್ ಇದ್ದಾರೆ. ಸುದೀಪ್‌ ಅವರದು ಅತಿಥಿ ಪಾತ್ರ.